ಬಹುಮುಖ ಪ್ರತಿಭೆಯ ಶಿಕ್ಷಕಿ ನಂದಿನಿ ಸನಬಾಳ್ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರ ಪರಿಚಯಾತ್ಮಕ ಬರಹ
ಸಂಘಟನಾ ಚತುರೆ ಸಹೃದಯ ಲೇಖಕಿ ಶಿಕ್ಷಕಿ ನಂದಿನಿ ಸನಬಾಳ್ ೨೦೨೨ರ ಸಪ್ಟೆಂಬರ್ ತಿಂಗಳಲ್ಲಿ ನನ್ನ ಸಂಪಾದಿತ ಕೃತಿ ಅಭಿಪ್ರೇರಣೆ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜರುಗಿತು. ಅದು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿತ್ತು. ನಾಡಿನ ವಿವಿಧ ಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವಾರು ಶಿಕ್ಷಕ ಶಿಕ್ಷಕಿಯರು ತಮ್ಮ ತರಗತಿ ಕೊಠಡಿಯಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನು ನನಗೆ ಒದಗಿಸಿದ್ದರು.ಕೃತಿ ಬಿಡುಗಡೆ ದಿನದಂದು ಅವರಿಗೆ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಆ ಕೃತಿಯನ್ನು ನೀಡಿದ್ದೆವು. ಕಾರ್ಯಕ್ರಮ ಮುಗಿದ…