ಪ್ರೌಢ ಶಾಲೆಯ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ: ಕೈ ತುಂಬ ಸಂಬಳವಿದ್ದರು ಕೇವಲ 5000 ರೂಪಾಯಿಗಾಗಿ ಲೋಕಾಯುಕ್ತ ಪೋಲಿಸರ ಅತಿಥಿಯಾದ..
ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ.ಖಾಸಗಿ ಶಾಲೆಗಳೂ ಕೂಡ ಎರಡು ದಿನಗಳಿಂದ ಆರಂಭವಾಗಿವೆ.. ಸಾರ್ವಜನಿಕರು ಮನಸ್ಸು ಮಾಡಿದರೆ ಮಾತ್ರ ಅವ್ಯವಸ್ಥೆಯನ್ನು ಸರಿಮಾಡಬಹುದು.. ಶಿಕ್ಷಣ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಬ್ರಷ್ಟಾಚಾರ ಹೆಚ್ಚುತ್ತಿದೆ.. ಬೆಂಗಳೂರು: ಟಿ.ಸಿ ಕೊಡಲು 9 ನೇ ತರಗತಿಯ ವಿದ್ಯಾರ್ಥಿಯೊಬ್ಬನ ಪೋಷಕರಿಗೆ 5,000 ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಸ್ವೀಕರಿಸುತ್ತಿದ್ದಾಗ ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಪ್ರಾಚಾರ್ಯ ವಿ. ನಾರಾಯಣ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬುಧವಾರ ನಾರಾಯಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯು ಅನುಧಾನಿತ ಪ್ರೌಢಶಾಲೆಯಾಗಿದೆ….