ಪ್ರೇಮ ಲೋಕದ ಬಾಗಿಲಲಿ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಕವನದ ರೇಖಾಚಿತ್ರಗಳು ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ
ಪ್ರೇಮ ಲೋಕದ ಬಾಗಿಲಲಿ ನೀ ಇಲ್ಲದಿರೆ ಏನೋ ಕಳೆದ ಭಾವ ಈ ಮನದೊಳು ನನ್ನ ಮನದ ಸವಿ ನೆನಪು ನೀ ನೆನಪಾಗಿ ಕಾಡುತಿಹೆ ನಲ್ಲೆ ಅಂತರಂಗದಿ ಹುದುಗಿಹ ಮೋಹ ನಿನ್ನ ನೆನಪ ಮತ್ತೆ ಮತ್ತೆ ಸೆಳೆಯುತಿಹುದು ನಮ್ಮೊಲವ ಭಾವಕ್ಕೆ ಬರ ಬಂದ ಹಾಗೆ ಏಕೀ ರೀತಿ ಕಾಡುತಿರುವೆ ನಿರೀಕ್ಷೆ ಯ ಬದುಕಿನಲಿ ಎಂದಾದರೂ ಸೇರಬಹುದು ನಾವು ಎಂಬ ಆಶಾಭಾವ ಮನಸಲಿ ಉಸಿರಲ್ಲಿ ಹುದುಗಿರುವ ನಿನ್ನ ನೆನಪು ಪ್ರೇಮ ಲೋಕದ ಬಾಗಿಲಲಿ ಕಾಯುತಿರುವೆ ನಿನಗಾಗಿ ಈ ವಯಸಿಗೊಂದು ಬಯಕೆ…