ಪ್ರೀತಿ ಅಂದರೆ ಹೀಗೇನಾ.?ಯುವಲಹರಿ ಶೈಲಿಯ ಬರಹ ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಅವರಿಂದ ಬರಹಕ್ಕೆ ಪೂರಕವಾದ ರೇಖಾಚಿತ್ರವನ್ನು ಅಣ್ಣಿಗೇರಿ ಯ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ ಚಿತ್ರಿಸಿರುವರು
ಪ್ರೀತಿ ಅಂದರೆ ಹೀಗೆನಾ.? ಇಬ್ಬರು ವ್ಯಕ್ತಿಗಳು ಪರಸ್ಪರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುವಾಗ, ಈ ಭಾವನೆಯು ಪೋಷಿಸುತ್ತದೆ. ಪ್ರೀತಿಯು ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಬಂಧಗಳನ್ನು ಒಳಗೊಂಡಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು. ಒಬ್ಬ ವ್ಯಕ್ತಿಯು ಇನ್ನೊಬ್ಬರೊಡನೆ ಭಾವನಾತ್ಮಕ ಪ್ರೀತಿ ಹೊಂದಿದ್ದರೆ, ಆ ವ್ಯಕ್ತಿಯು ತನ್ನ ಮನಸ್ಸಿನಿಂದ ಅದನ್ನು ಅನುಭವಿಸುತ್ತಾನೆ. ಇದು ಅವರಿಗೆ ಸಂತೋಷ, ಕಣ್ಣೀರು, ಸಾಂತ್ವನ ತರುತ್ತದೆ ಮತ್ತು ಎಲ್ಲಾ ರೀತಿಯ ಭಾವನೆಗಳನ್ನು ಪ್ರೇರೇಪಿಸುತ್ತದೆ….