ನೋವು ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಪೂರಕವಾಗಿ ರೇಖಾಚಿತ್ರವನ್ನು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಒದಗಿಸಿರುವರು
ನೋವು…… ನಿನ್ನ ಕೈ ನೋವಿಗೆ ಮುಲಾಮು ಸವರಲು ಬರಬೇಕಾದವನು ಬರಲಾಗದೇ ಕೊರಗುತಿಹೆನು ಎಷ್ಟು ದೂರ ಎಷ್ಟು ಅಂತರ ಏಕೀ ತಾಪ ಸಂಧಿಸಲಾಗದ ನೋವು ಒಂಟಿ ಬದುಕು ಹೊತ್ತು ಕಳೆಯುವುದಿಲ್ಲ ಬರೀ ನಿರಾಸೆ ನಿನ್ನ ನೋಡದ ಮನಸ್ಸು ತಡವರಿಸಿ ನೆನೆದು ಕೊರಗುತಿಹೆನು ಎದೆಯಲ್ಲಿ ಬಚ್ಚಿಟ್ಟು ನೋವನು ಕಥೆ,ಕವನ, ಲೇಖನ,ಲಹರಿ ಇತ್ಯಾದಿ ಹೆಸರಿನಲಿ ಗುರುತಿಸಿಕೊಂಡು ನಿನ್ನ ನೆನಪಲಿ ಗೀಚುತಿರುವೆ ಆದರೂ ನಿಜವಾಗಿಯೂ ನೀ ನನ್ನ ತೋಳಲಿ ಬಂಧಿಯಾಗಲಾರೆ ಎಂಬ ನೋವು ದಿಂಬು ಒದ್ದೆಯಾಗಿ ನಿಮ್ಮ ನೆನಪಿಗೆ ಬೆಳಗಾಗುವುದರೊಳಗೆ ಚಿತ್ತಾರ ಬಿಡಿಸಿಬಿಡುತ್ತದೆ…