ನಿನ್ನ ಚಲುವ ವದನ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಅವರಿಂದ ಕವನಕ್ಕೆ ಪೂರಕವಾದ ರೇಖಾಚಿತ್ರವನ್ನು ಅಣ್ಣೀಗೇರಿಯ ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಅವರಿಂದ
ನಿನ್ನ ಚಲುವ ವದನ ನನ್ನ ಹೃದಯ ಸಾಮ್ರಾಜ್ಯದ ಸೌಂದರ್ಯ ನೀ ಭುವಿಯಲರಳಿದ ಅಪ್ಸರೆ ನಿನ್ನ ಅಧರ ಸಿಹಿಯ ಸವಿಯುವ ರಸಿಕ ನಾ ಮೋಡ ರಹಿತ ಹವಾಮಾನ ದೊಳು ಶೋಭಿಸುತಿರುವ ಮಂದಾರ ಪುಷ್ಪ ನೀ ನೀರವ ಆಕಾಶದ ರಾತ್ರಿ ಬೆಳ್ಳಿಚುಕ್ಕಿಯಾಗಿ ಕಂಗೊಳಿಸುವ ನಿನ್ನ ಕಂಡ ಈ ಮನ ಸೋತು ಶಯ್ಯಾಗೃಹದಲಿ ಒಮ್ಮೆ ನಿನ್ನ ಸೇರುವಾಸೆಯಾಗಿ ಶರಣಾಗಿ ಕವಿ ಮನಸ್ಸಿನಲ್ಲಿ ಸೃಜನಶೀಲತೆ ಮತ್ತು ಕಲ್ಪನೆಯಿಂದ ತುಂಬಿಹೋಗಿದೆ, ಎಷ್ಟು ಕವನ ಗೀಚಿದರೂ ಮುಗಿಯದ ಸೌಂದರ್ಯ ರಾಶಿ ಸರಸದಲಿ ಸೇರಲು ಕಾತರಿಸುವ ಮನ…