ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ..
ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ.. ಇಂದು ನವಿಲುತೀರ್ಥ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ.ಪ್ರಸಾದ ವಿನಿಮಯ ಜರುಗಿತ್ತು ಆಫೀಸಿಗೆ ಬರುವಾಗ ಪ್ರಸಾದ ಸ್ವೀಕರಿಸಿ ಬರುವಾಗ ಅರ್ಚಕರು ಸರ್ ಇವತ್ತು ಅಂತರ್ಜಾಲ ತಾಣದಲ್ಲಿ ದೇವಾಲಯದ ಕುರಿತು ಬರಹ ಹಾಕಿರಿ ಅಂತ ಹೇಳಿದರು. ನವಿಲುತೀರ್ಥ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ. ಇದು ಸವದತ್ತಿಯಿಂದ ೧೧ ಕಿ.ಮೀ ಮುನವಳ್ಳಿಯಿಂದ ೫ ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು. ನವಿಲುತೀರ್ಥದ ಬಸ್ ನಿಲುಗಡೆಯಿಂದ…