ನಮ್ಮ ರಾಜ್ಯದ ಶಿಕ್ಷಕರಿಗೆ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡಿ: ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು..ಜಂಟಿ ಕಾರ್ಯದರ್ಶಿ ಅವರಿಂದ, ರಾಜ್ಯ ಸರ್ಕಾರದ ಅಪರ ಕಾರ್ಯದರ್ಶಿಗಳಿಂದ ಪತ್ರ ಸಂದೇಶ ರವಾನೆ..
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಓಪಿಎಸ್ ಜಾರಿ ಮಾಡುವಂತೆ ಪ್ರತಿಭಟನೆ,ಹೋರಾಟವನ್ನು ಮಾಡಿದ್ದಾರೆ.ಸಿಎಮ್ ಸೇರಿದಂತೆ ಸಚಿವರಿಗೆ,ಶಾಸಕರಿಗೆ ಮನವಿ ಕೂಡ ಮಾಡಿದ್ದಾರೆ.ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡಿರುವ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.. ಮಾನ್ಯರೆ.. ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇವರು, ದಿನಾಂಕ:01.04.2006ಕ್ಕಿಂತ ಮೊದಲು ಅಧಿಸೂಚನ ಹೊರಡಿಸಿ, ಸೇವೆಗೆ ಸೇರಿದ ಶಿಕ್ಷಕರಿಗೆ ನೂತನ ಪಿಂಚಣಿ ಯೋಜನೆಯನ್ನು (NPS) ಜಾರಿಗೊಳಿಸಲಾಗಿದೆ. ಇದರಿಂದ ಸರ್ಕಾರಿ ಸೇವೆಗೆ ಸೇರಿದ ಶಿಕ್ಷಕರಿಗೆ ಸಂಧ್ಯಾ ಕಾಲದ ಬದುಕಿಗೆ ಭದ್ರತೆಯನ್ನು…