ಇಂದು ಸ್ನೇಹ ದಿನ ತನ್ನಿಮಿತ್ತ ಕಲಬುರಗಿ ಜಿಲ್ಲೆಯ ಶಿಕ್ಷಕಿ ನಂದಿನಿ ಸನಬಾಳ್ ಅವರ ಬರಹ ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಮ್ಮ ಓದಿಗೆ
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು ಜೀವನದನಂತ ದುರ್ಭರ ಭವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ ಮೇಲಿನ ಈ ಸಾಲುಗಳು ಚನ್ನವೀರ ಕಣವಿಯವರ ಪದ್ಯದಲ್ಲಿ ಗೆಳೆತನದ ಕುರಿತು ಮೂಡಿ ಬಂದವುಗಳು.ನಾವು ಈ ಪದ್ಯವನ್ನು ನಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ಕಂಠಪಾಠ ಮಾಡಿ ಹಾಡುತ್ತಿದ್ದೆವು.ಆಗ ನಮಗೆ ಗೆಳೆತನದ ಮಹತ್ವದ ಕುರಿತು ನಮ್ಮ ಮೇಷ್ಟ್ರು ಈ ಪದ್ಯವನ್ನು ವಿವರಿಸುವ ಸಂದರ್ಭದಲ್ಲಿ ಹೇಳಿದ್ದ ನೆನಪು. ಆದರೆ…