ಸೃಜನಶೀಲ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ
ಸೃಜನಶೀಲ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನಾನು ಧಾರವಾಡ ಬಳಿಯ ಹೆಬ್ಬಳ್ಳಿಯಲ್ಲಿ ‘ಅಮ್ಮ ನಾನು ಶಾಲೆಗೆ ಹೋಗುವೆ’ ಎಂಬ ಶೈಕ್ಷಣಿಕ ಕಿರುಚಿತ್ರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೆ. ಆಗ ಅಪರೂಪದ ವ್ಯಕ್ತಿಯ ಆಗಮನವಾಯಿತು. ಎಲ್ಲರ ಗಮನ ಅವರ ಕಡೆ ಹರಿಯಿತು. ಅವರ ಪರಿಚಯ ಲಕ್ಕಮ್ಮನವರ ನನಗೆ ಮಾಡಿಸಿದರು. ಅವರೇ ವೈ.ಬಿ.ಕಡಕೋಳ. ಸಾಹಿತಿ, ಶಿಕ್ಷಕರು.ಆ ದಿನ ಅವರು ಕ್ಯಾಮರಾ ಕ್ಲಾಪ್ ಮಾಡಿದರು. ಅವರು ನನಗೆ ಕೆಲವು ದಿನಗಳ ಹಿಂದೆ ಲಕ್ಕಮ್ಮನವರ ಗುರುಗಳ ಮೂಲಕ ಪೋನ್ ಮಾಡಿ ಶೈಕ್ಷಣಿಕ ಚಟುವಟಿಕೆಗಳ ಕುರಿತು ತಮ್ಮ ಸಂಪಾದಿತ…