ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಹಟ್ಟಿ ಹಬ್ಬ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರ ಬರಹ
ಹಟ್ಟಿ ಹಬ್ಬ.. ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು.ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು ಈ ಹಬ್ಬವನ್ನು ಸಡಗರದಿಂದ ಆಚರಿಸುವರು. ಈ ಹಬ್ಬಕ್ಕೆ ಪ್ರಣತಿ ಹಬ್ಬ, ಹಟ್ಟಿ ಹಬ್ಬ, ದೀವಳಿಗೆ ಹಬ್ಬ ಎಂತಲೂ ಕರೆಯುವರು. ಜಗತ್ತಿನ ಜನರ ಜೀವನದಲ್ಲಿ ಜ್ಯೋತಿಗೆ ಅತ್ಯಂತ ಮಹತ್ವದ ಸ್ಥಾನವಿದೆ.ಶ್ರೀರಾಮನು ಲಂಕೆಯನ್ನು ಗೆದ್ದು ಸೀತೆಯೊಡನೆ ಪಟ್ಟಾಭಿಷೇಕವಾದ ದಿನವೇ ದೀಪಾವಳಿ ಎಂಬ ನಂಬಿಕೆ.ಬಲಿಚಕ್ರವರ್ತಿಯನ್ನು ವಿಷ್ಣುವು ವಾಮನ ಅವತಾರದಿಂದ ಪಾತಾಳಕ್ಕೆ ತುಳಿದ ದಿನದ…