ತುಂತುರು ಮಳೆ ಕವನ ಶ್ರೀಮತಿ ಜ್ಯೋತಿ ಕೋಟಗಿ ಅವರಿಂದ
ತುಂತುರು ಮಳೆ.. ವರುಣನಾಗಮನದಿ ಭುವಿಗೆ ಕಳೆ ಬಾಣಂಚಿನ ಮಡಿಲಿನಿಂದ ಜಾರಿ ಭೂಮಾತೆಯ ಒಡಲ ಸೇರಿ ತಂಪೆರಗಿತು ಸುತ್ತಲೂ ಹರಡಿ ಮೈ ಜಾಡಿಸುವ ಗುಬ್ಬಚ್ಚಿಗಳು ಗರಿಗೆದರುವ ಸುಂದರ ನವಿಲುಗಳು ಎಲೆಗಳಿಂದ ಜಾರುವ ನೀರ ಬಿಂದುಗಳು ಆ ಬಿಂದುಗಳ ಹೊತ್ತು ನಿಂತ ಸುಮಗಳು ತಂಪಾದ ಗಾಳಿಯ ಇಂಪಿನ ಒಡನಾಟ ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ ರೋಮಾಂಚನಗೊಳಿಸುವ ವಾತಾವರಣ ಮುಂಗಾರಿನ ಮಳೆಯ ಈ ಸಂಚಲನ ಸದ್ದು ಗದ್ದಲಗಳಿಗೆ ಕೊಂಚ ವಿರಾಮ ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ ತುಂತುರು ಮಳೆಯ ಆಸ್ವಾದಿಸೋಣ ಮಳೆ…