ಜುಲೈ 31 ರಂದು ಸೇವೆಯಿಂದ ನಿವೃತ್ತರಾಗುತ್ತಿರುವ ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶೈಲ ಕರೀಕಟ್ಟಿ ಯವರ ಸೇವೆಯನ್ನು ನೆನೆದು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಬರಹ
ಸಹೃದಯಿ ನೇರ ದಿಟ್ಟ ನಿಲುವಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ ಬೆಂಕಿನುಂಡೆಯ ಬಾನಿಗುರುಳು ಬಿಟ್ಟು ಈ ಮೇಲಿನ ಗೀತೆಯನ್ನು ಕೇಳುತ್ತಿದ್ದರೆ ನೇರ ದಿಟ್ಟ ನಿಲುವಿನ ವ್ಯಕ್ತಿ ಶ್ರೀಶೈಲ ಕರೀಕಟ್ಟಿಯವರ ವ್ಯಕ್ತಿತ್ವ ನಮ್ಮ ಕಣ್ಣಮುಂದೆ ತೇಲಿಬರುತ್ತದೆ. ಜುಲೈ ೩೧ ಕರೀಕಟ್ಟಿಯವರು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಿವೃತ್ತಿ ಹೊಂದುವ ದಿನ.ಈ ದಿನದ ಮುಂಚಿತವಾಗಿಯೇ ಹಲವು ಸಂಘ ಸಂಸ್ಥೆಗಳ ಶಾಲೆಯವರು ಅವರನ್ನು…