ಜೀವ ಸ್ಪರ್ಶ ಬಾಡಿದ ಕನಸುಗಳಿಗೆ ಜೀವ ತುಂಬುವ ಭಾವ ಹೊಂದಿದ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ ರೇಖಾಚಿತ್ರವನ್ನು ನೀಡಿರುವವರು ರೇಖಾ ಮೊರಬ ಚಿತ್ರ ಕಲಾ ಶಿಕ್ಷಕಿ ಹುಬ್ಬಳ್ಳಿ
ಜೀವ ಸ್ಪರ್ಶ ಕಂಡೂ ಕಾಣದ ಜೀವ ಜಾಲದೊಳು ಮರೆತ ನೋವ ಪುಟಗಳು ಮಾಸುವ ಮುನ್ನ ನನ್ನ ನಲ್ಲೆ ಪರಿಚಯದ ಪರಿಯದು ಮರೆತ ನೋವುಗಳ ಚಿಗುರೊಡೆದು ಪ್ರೀತಿ ಮೂಡಿ ಹೊಸ ಸೆಲೆಯ ಚಿಗುರು ಹೇಳಿ ತಿಳಿಯದ ಸ್ಪರ್ಶ ಕೇಳಿ ತಿಳಿಯದೆ ನೀಡಿ ಬದುಕಿನ ಸೆಳೆತಕೆ ನೀಡಿಹ ಪ್ರೀತಿಯ ಸಂಜೀವನದ ಸ್ಪರ್ಶ ನಿಶ್ಯಬ್ದ ಮೌನದೊಳು ಏನೋ ಹೊಸ ಬಯಕೆ ಮತ್ತೆ ಚಿಗುರೊಡೆದ ಪ್ರೇಮ ನೋವುಗಳ ನಲಿವು ನೀಡಿದ ಸ್ಪರ್ಶ ನಿನ್ನ ಎದೆಯಾಳದಿ ಮಲಗಿ ನನ್ನೆಲ್ಲ ಬಯಕೆಗಳ ಹೇಳಿ ಕಾಣಬೇಕೆಂಬ ಆಲಿಂಗನದಿ…