ಜನೇವರಿ 12 ಸ್ವಾಮಿ ವಿವೇಕಾನಂದ ಜಯಂತಿ ತನ್ನಿಮಿತ್ತ ಶಿಕ್ಷಕಿ ನಂದಿನಿ ಸನಬಾಲ್ ಲೇಖನ. ರೇಖಾಚಿತ್ರವನ್ನು ರೇಖಾ ಮೊರಬ ಚಿತ್ರ ಕಲಾ ಶಿಕ್ಷಕಿ ತಗೆದಿರುವರು
ದೇಶದ ಅಭಿವೃದ್ಧಿ ಯುವಕರಿಂದ ಸಾಧ್ಯ… ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತು. ಒಂದು ದಿನ ಊರಿಗೆ ಹೋಗುತ್ತಾ ಇದ್ದೆ. ಬಸ್ಸಿನಲ್ಲಿ ಕುಳಿತುಕೊಳ್ಳಲು ಸೀಟು ಸಿಗದೆ ಇದ್ದಾಗ ನಿಂತುಕೊಂಡೆ ಪ್ರಯಾಣ ಮಾಡುತ್ತಾ ಇದ್ದೆ…ಅಲ್ಲಿಯೆ ಕಾಣಿಸಿಕೊಂಡ ಒಬ್ಬ ಹುಡುಗ, ಮೇಡಂ ಈ ಕಡೆ ಬನ್ನಿ ನಿಮಗಾಗಿ ಸೀಟು ಹಿಡಿದ್ದಿದ್ದಿನಿ ಅಂತ ಹೇಳಿದ್ದು ಕಂಡುಬಂತು. ಅವನು ನನ್ನ ವಿದ್ಯಾರ್ಥಿ ಅಂತ ತಿಳಿದು ಬಂತು…ನನ್ನ ಹಿರಿಯ ವಿದ್ಯಾರ್ಥಿ ಕುಳಿತುಕೊಳ್ಳಲು ಸೀಟು ಕೊಟ್ಟ, ಕುಳಿತೆನು. ಯಾವಾಗಲೂ ನಗು ಮುಖ, ಮುಗ್ಧ ಮನಸ್ಸಿನ ನಾಚಿಕೆ ಸ್ವಭಾವದ ನನ್ನ…