ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಶೋಕ ಸಜ್ಜನ!! ದಿಡೀರ ರಾಜೀನಾಮೆ ನೀಡಲು ಏನು ಕಾರಣ? ಇಲ್ಲಿದೆ ನೋಡಿ ಮಾಹಿತಿ.
ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅಶೋಕ ಸಜ್ಜನ… ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ರಾಜ್ಯಾಂತ ಸಂಘಟಿಸಿ ಶಿಕ್ಷಕರ ಬೇಕು ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ.ನನ್ನ ಅವಧಿಯಲ್ಲಿ ಸಹಕಾರ ನೀಡಿ ಸ್ಪಂದಿಸಿದ ಸರ್ವರಿಗೂ ಅಭಿವಂದನೆಗಳನ್ನು ಸಲ್ಲಿಸುತ್ತ ಶಿಕ್ಷಕ ಸೇವೆಯಿಂದ ನಿವೃತ್ತನಾದ ಪ್ರಯುಕ್ತ ರಾಜೀನಾಮೆಯನ್ನು ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾಗಿರುವ ಮಲ್ಲಿಕಾರ್ಜುನ ಉಪ್ಪಿನ ಇವರಿಗೆ ಸಲ್ಲಿಸಿರುತ್ತೇನೆ…