ಗುರು ಮಾತೆ ಬಸಮ್ಮಾ ಏಗನಗೌಡರ ಅವರ ಧರಣಿಸುತೆ ಮಂದಸ್ಮಿತೆ ಕವನ ಸಂಕಲನ ಕುರಿತು ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ ಪರಿಚಯಾತ್ಮಕ ಬರಹ
ಧರಣಿಸುತೆ ಮಂದಸ್ಮಿತೆ ಕವನ ಸಂಕಲನ ಕವಯತ್ರಿ ಬಸಮ್ಮ ರಾ ಏಗನಗೌಡ್ರ ಶ್ರೀಮತಿ ಬಸಮ್ಮ ಏಗನಗೌಡ್ರ ಅವರು ಇತ್ತೀಚಗೆ ಹೊರತಂದ ಕವನ ಸಂಕಲನ ಧರಣಿಸುತೆ ಮಂದಸ್ಮಿತೆ. ಹೆಸರೇ ಸೂಚಿಸುವಂತೆ ಧರಣಿಸುತೆ ಮಂದಸ್ಮಿತೆ ಧರಣಿಸುತೆಯಾದ ಮಹಿಳೆಯು ಧರಣಿಯ ತಾಳ್ಮೆಯ ಗುಣವನ್ನು ಹೊಂದಿ ಸಕಲ ನೋವುಗಳನ್ನು ಮರೆತು ಜಗದ ಕಣ್ಣಿಗೆ ಮಂದಸ್ಮಿತೆಯಾಗಿ ಬದುಕ ಬಂಡಿ ಸಾಗಿಸುವವಳು. ಈ ಹಿಂದೆ ನಾನು ಇವರ ಮುದ್ದು ಗಿಣಿ ಹಾಡಿ ಕುಣಿ ಮತ್ತು ಸ್ವರ ಚಂದಿರ ಕಾವ್ಯ ಹಂದರ ಕೃತಿಗಳನ್ನು ನೋಡಿದ್ದೆ.ಅವುಗಳ ಕುರಿತು ಕಿರು ಬರಹ…