ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ..
ಕಡಕೋಳ ಗುರುಗಳ ವೈಶಿಷ್ಯಪೂರ್ಣ ಹುಟ್ಟು ಹಬ್ಬ.. ಮುನವಳ್ಳಿ: “ಹುಟ್ಟು ಹಬ್ಬದ ವಾತಾವರಣ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ರೂಪದಲ್ಲಿ ಜರುಗುತ್ತಿವೆ.ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಗುರುಗಳ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿ ಸಿಹಿ ವಿತರಿಸುವ ಮೂಲಕ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ” ಎಂದು ಮುನವಳ್ಳಿ ಯ ಜೈಂಟ್ಸ್ ಗ್ರುಪ್ ಅಧ್ಯಕ್ಷ ರಾದ ಶಿವಾಜಿ ಮಾನೆ ಹೇಳಿದರು. ಅವರು ಸ್ಥಳೀಯ ವ್ಹಿ.ಪಿ.ಜೇವೂರ ಶ್ರವಣ ನ್ಯೂನ್ಯತೆ ಮಕ್ಕಳ ಶಾಲೆಯಲ್ಲಿ ತಾಲೂಕಿನ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ…