ಏಳನೇ ವೇತನ ಆಯೋಗದ ವರದಿ ಕುರಿತಂತೆ ಸಿಎಸ್ ಷಡಕ್ಷರಿಯವರಿಂದ ಸದ್ಯದ ಮಾಹಿತಿ ಇಲ್ಲಿದೆ ನೋಡಿ. ಇವತ್ತಿಗೆ ಮುಕ್ತಾಯವಾದ ಅವಧಿ ವಿಸ್ತರಣೆ!!! ಸರ್ಕಾರ ನೀಲುವುವೇನು?
ಮಾ.15- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ವರದಿ ಸಿದ್ಧಗೊಂಡಿದ್ದು, ಅದನ್ನು ಸ್ವೀಕರಿಸಲು ರಾಜ್ಯಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ 7ನೇ ರಾಜ್ಯ ವೇತನ ಆಯೋಗದ ಅವ ಇಂದಿಗೆ ಮುಕ್ತಾಯಗೊಳ್ಳುತ್ತಿದೆ. ಉನ್ನತ ಮೂಲಗಳ ಪ್ರಕಾರ, ಸಿದ್ಧವಾಗಿರುವ ವರದಿ ಸಲ್ಲಿಸಲು ಆಯೋಗ ತಯಾರಿದೆ. ಆದರೆ ಸರ್ಕಾರವೇ ಹಿಂದೇಟು ಹಾಕುತ್ತಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪಂಚಖಾತ್ರಿ ಯೋಜನೆಗಳಿಗೆ 52 ಸಾವಿರ ಕೋಟಿ…