ಉರ್ದು ಪ್ರತಿಭಾ ಕಾರಂಜಿ ಉದ್ಘಾಟನೆ
ಉರ್ದು ಪ್ರತಿಭಾ ಕಾರಂಜಿ ಉದ್ಘಾಟನೆ ಮುನವಳ್ಳಿ : “ದೇವರು ಎಲ್ಲ ಮಕ್ಕಳಲ್ಲಿ ಸಮಾನ ಕಲೆ, ಪ್ರತಿಭೆಗಳನ್ನು ನೀಡಿರುತ್ತಾನೆ. ಯಾರೂ ಅವುಗಳನ್ನು ಸರಿಯಾಗಿ ಪೋಷಿಸಿ, ಬೆಳೆಸಿಕೊಂಡು ಬರುತ್ತಾರೋ ಅವರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಚಿಮ್ಮಿ ಸಮಾಜದಲ್ಲಿ ಗುರುತಿಸಿಕೊಂಡು, ತಮ್ಮದೇ ಆದ ಛಾಪನ್ನು ಮೂಡಿಸಿ, ಕೊಡುಗೆಯನ್ನು ನೀಡುತ್ತಾರೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ” ಎಂದು ಸವದತ್ತಿ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ ಹೇಳಿದರು. ಅವರು ಪಟ್ಟಣದ ಗಾಂಧಿನಗರದ ಸರಕಾರಿ ಉರ್ದು ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಾ…