ಉದಯೋನ್ಮುಖ ಕವಯಿತ್ರಿ ಶ್ರೀಮತಿ ಜ್ಯೋತಿ ಕೋಟಗಿಯವರ ಕವನ ಮೋಡಗಳ ಸರಸ
ಮೋಡಗಳ ಸರಸ ಮೋಡಗಳ ಸರಸಕ್ಕೆ ಮಳೆ ಹನಿ ತಾನು ನಾಚಿ ತುಂತುರು ಹನಿಯಾಗಿ ಕಪ್ಪೆಚಿಪ್ಪಿನೊಳಗಡಗಿತು ಅಡಗಿ ತಾನು ಮುತ್ತಾಗಿ ನಾರಿಯ ಕೊರಳ ಸೇರಿತು ||೧|| ಮೋಡಗಳ ಸರಸಕ್ಕೆ ಮಳೆಹನಿ ತಾನು ನಾಚಿ ಭೂತಾಯಿಯ ಸೆರೆಗಲಡಗಿ ಬೀಜಗಳ ಮೊಳೆವಂತೆ ಮಾಡಿ ತಾನು ಮುದದಿ ನಲಿದು ಎಲ್ಲೆಡೆ ಹಸಿರ ಪಸರಿಸಿತು ||೨|| ಮೋಡಗಳ ಸರಸಕ್ಕೆ ಮಳೆಹನಿ ತಾನು ನಾಚಿ ಸರೋವರದಲಿ ಒಂದಾಯಿತು ಹಳ್ಳಕೊಳ್ಳಗಳ ಜೊತೆ ಸೇರಿ ಜಲಪಾತವಾಗಿ ನರ್ತಿಸಿ ಕಾಡು ಮೇಡುಗಳಲ್ಲಿ ಕಳೆದೋಯಿತು ||೩|| ಮೋಡಗಳ ಸರಸಕ್ಕೆ ಮಳೆಹನಿ ತಾನು…
Read More “ಉದಯೋನ್ಮುಖ ಕವಯಿತ್ರಿ ಶ್ರೀಮತಿ ಜ್ಯೋತಿ ಕೋಟಗಿಯವರ ಕವನ ಮೋಡಗಳ ಸರಸ” »