ಇಂದು ರಾಷ್ಟ್ರ ಕಂಡ ಇಬ್ಬರು ಮಹನೀಯರ ಸ್ಮರಣೆಯ ದಿನ. ಗಾಂಧೀಜಿ ಮತ್ತು ಶಾಸ್ತ್ರೀಜಿ ಈ ಇಬ್ಬರೂ ಮಹನೀಯರ ಕುರಿತು ವೈ. ಬಿ. ಕಡಕೋಳ ಶಿಕ್ಷಕರ ಬರಹ
ಗಾಂಧೀಜಿ ಮತ್ತು ಶಾಸ್ತೀಜಿ ಸ್ಮರಣೆ ಇತ್ತೀಚಿಗೆ ನಾನು ಬೆಂಗಳೂರಿನ ಗಾಂಧಿ ಭವನಕ್ಕೆ ಭೇಟಿ ನೀಡಿದ್ದೆ.ಅಲ್ಲಿ ಗಾಂಧೀಜಿಯವರ ಸ್ಮರಣೆಯ ಕೊಠಡಿಗಳನ್ನು ಗಮನಿಸಿದೆ.ಇಡೀ ಭವನ ಇಂದು ಬಹಳಷ್ಟು ವಿಭಿನ್ನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.ಶೇಷಾಧ್ರಿಪುರಂನ ಈ ಗಾಂಧಿಭವನ ನಿಜಕ್ಕೂ ಅವರ ಕುರಿತ ಸ್ಮರಣಿಕೆಗಳು ಚಿತ್ರಗಳು ಅಲ್ಲಲ್ಲಿ ಗಾಂಧೀಜಿ ಬದುಕಿನ ಘಟನೆಗಳ ಚಿತ್ರಗಳನ್ನು ಒಳಗೊಂಡಿದೆ.ಇದನ್ನು ೧೯೬೫ ರಲ್ಲಿ ಅಂದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರು ಉದ್ಘಾಟಿಸಿದ ಸಂಗತಿ ಗಮನಿಸಿದೆನು.ಇಲ್ಲಿ ಕಾರ್ಯಕ್ರಮ ಜರುಗಿಸಲು ಹಲವು ಸಭಾಭವನಗಳಿವೆ.ಒಂದೆಡೆ ಆಯುರ್ವೇದ ಉಪಚಾರದ ಕೊಠಡಿ ಇದೆ.ಚಿತ್ರಕಲಾ ಗ್ಯಾಲರಿ ಇದೆ.ಮತ್ತೊಂದೆಡೆ ಖಾದಿ…