ಇಂದು ಗೌರಿ ಹುಣ್ಣಿಮೆ ಈ ಹುಣ್ಣಿಮೆ ಉತ್ತರ ಕರ್ನಾಟಕದ ವೈಶಿಷ್ಟ್ಯಗಳನ್ನು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ತಮ್ಮ ಬರಹದ ಮೂಲಕ ಕಟ್ಟಿಕೊಟ್ಟಿರುವರು. ತಮ್ಮ ಓದಿಗಾಗಿ
ಸಕ್ಕರೆ ಆರತಿಯ ವಿಶೇಷತೆಯ ಗೌರಿ ಹುಣ್ಣಿಮೆ ಇಂದು ಗೌರಿ ಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆಯ ಸಡಗರ ಹೇಳತೀರದ್ದು.ಇದು ವೈಶಿಷ್ಟö್ಯಪೂರ್ಣವಾಗಿ ಆಚರಿಸಲ್ಪಡುವ ಹುಣ್ಣಿಮೆ. ಶ್ರಾವಣ ಮಾಸದ ನಂತರ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಜೋರು ಡಿಸೆಂಬರ್ ಅವಧಿಯವರೆಗೂ ತನ್ನದೇ ಭರಾಟೆಯಲ್ಲಿ ಜರುಗುತ್ತ ಬರುತ್ತವೆ.ಅದರಲ್ಲೂ ಅಕ್ಟೋಬರ್ ನವೆಂಬರ್ ಹಬ್ಬಗಳ ಸಡಗರ ಹೇಳತೀರದ್ದು.ಉತ್ತರ ಕರ್ನಾಟಕದಲ್ಲಿ ಮಹಾನವಮಿ.ಸೀಗೆಹುಣ್ಣಿಮೆ.ಹಟ್ಟಿ ಹಬ್ಬ(ದೀಪಾವಳಿ).ಗೌರಿ ಹುಣ್ಣಿಮೆಗಳ ಆಚರಣೆಯ ರೀತಿ ವಿಶೇಷವಾಗಿದೆ. ಹೊಸದಾಗಿ ಮದುವೆ ಆಗುವ ಅಂದರೆ ವರ ನಿಶ್ಚಯವಾದ ಹೆಣ್ಣು ಮಕ್ಕಳಿಗೆ ಅವರ ಗಂಡನ ಕಡೆಯವರು. ಮದುವೆ ಆಗದೇ…