ಇಂದಿನಿಂದ ಆಷಾಢ ಮಾಸ ಪ್ರಾರಂಭ ಗುಳ್ಳವ್ವನ ಹಬ್ಬ ಎಂದು ಕರೆಯಲ್ಪಡುವ ಉತ್ತರ ಕರ್ನಾಟಕದ ಆಚರಣೆ ಮಾಹಿತಿ ಪೂರ್ಣ ಬರಹ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ರಿಂದ
ಗುಳ್ಳವ್ವನ ಹಬ್ಬ ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಹಬ್ಬ ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದು. ಮದುವೆ ಆದವರು, ಆಗದವರು ಎಲ್ಲರೂ ಸೇರಿಕೊಂಡು ಉತ್ಸಾಹದಿಂದ ಆಚರಿಸುವ ಹಬ್ಬ ಇದಾಗಿದೆ. ಮದುವೆ ಆಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ಸಹ ‘ಮುತ್ತೈದೆ ಭಾಗ್ಯ’ಕ್ಕಾಗಿ, ಮಣ್ಣಿನ ¨ಸವಣ್ಣನನ್ನು, ಗುಳ್ಳವ್ವನನ್ನು ಮಾಡಿ ಪೂಜಿಸುತ್ತಾರೆ. ಈ ಮಣ್ಣು ಪೂಜೆ ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗಿ ನಾಗರ ಅಮಾವಾಸ್ಯೆಯವರೆಗೂ ನಡೆಯುತ್ತದೆ. ಅಮಾವಾಸ್ಯೆಯಿಂದ ಅಮಾವಾಸ್ಯೆ ಮಧ್ಯೆ ಬರುವ ಪ್ರತಿ ಮಂಗಳವಾರದಂದು ಈ ಗುಳ್ಳವ್ವನನ್ನು ಕೂಡಿಸಿ ಪೂಜೆ ಮಾಡುತ್ತಾರೆ. ಆಷಾಢ ಮಾಸದಲ್ಲೇ ‘ಗುಳ್ಳವ್ವನ…