ಅಮ್ಮಿನಬಾವಿ ಶಾಂತಲಿಂಗ ಶ್ರೀಗಳ 90ನೆಯ ವರ್ಧಂತಿ..
ಅಮ್ಮಿನಬಾವಿ ಶಾಂತಲಿಂಗ ಶ್ರೀಗಳ 90ನೆಯ ವರ್ಧಂತಿ.. ಧಾರವಾಡ: ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರ 90ನೆಯ ವರ್ಧಂತಿ ಸಮಾರಂಭ ಬುಧವಾರ (ಆಗಷ್ಟ-30ರಂದು) ರಾತ್ರಿ 8 ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ. ಬೈಲಹೊಂಗಲ ತಾಲೂಕು ದೊಡವಾಡ ಹಿರೇಮಠದ ಶ್ರೀಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭ ಉದ್ಘಾಟಿಸುವರು. ಹಿರಿಯ ಶ್ರೀಗಳು ತಮ್ಮ 5ನೆಯ ವರ್ಷದಲ್ಲಿಯೇ(1939) ಸನ್ಯಾಸ ದೀಕ್ಷೆಗೆ ಒಳಗಾಗಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಗುರುತ್ವಾಧಿಕಾರವನ್ನು…