ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ಮಾರ್ಚ-21 ರಿಂದ ಪುರಾಣ ಪ್ರವಚನ, ಧರ್ಮ ಚಿಂತನ ಸಮಾವೇಶ, ಏಪ್ರೀಲ್-2 ರಂದು ರಥೋತ್ಸವ
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ಮಾರ್ಚ-21 ರಿಂದ ಪುರಾಣ ಪ್ರವಚನ, ಧರ್ಮ ಚಿಂತನ ಸಮಾವೇಶ, ಏಪ್ರೀಲ್-2 ರಂದು ರಥೋತ್ಸವ ಧಾರವಾಡ: ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ಮಹಾತಪಸ್ವಿ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಏಪ್ರಿಲ್-2ರಂದು ಜರುಗಲಿದ್ದು, ಇದರ ಅಂಗವಾಗಿ ಮಾರ್ಚ್-21 ರಿಂದ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಪ್ರವಚನ ನಡೆಯಲಿದೆ. ಶುಕ್ರವಾರ ಸಂಜೆ 6-30ಕ್ಕೆ ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ಉದ್ಘಾಟಿಸುವರು. ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ…