ಅಮ್ಮಿನಬಾವಿಯಲ್ಲಿ ಶ್ರೀವೀರಭದ್ರ ದೇವರ ಜಯಂತ್ಯುತ್ಸವದಲ್ಲಿ ಅಭಿನವ ಶಾಂತಲಿಂಗ ಶ್ರೀ ನುಡಿ ‘ವೀರಭದ್ರ ಶಿವ ಸಂಸ್ಕೃತಿಯ ಸಂವರ್ಧಕ’
ಅಮ್ಮಿನಬಾವಿಯಲ್ಲಿ ಶ್ರೀವೀರಭದ್ರ ದೇವರ ಜಯಂತ್ಯುತ್ಸವದಲ್ಲಿ ಅಭಿನವ ಶಾಂತಲಿಂಗ ಶ್ರೀ ನುಡಿ ‘ವೀರಭದ್ರ ಶಿವ ಸಂಸ್ಕೃತಿಯ ಸಂವರ್ಧಕ’ ಧಾರವಾಡ: ಭಕ್ತಗಣದ ಬದುಕಿನಲ್ಲಿ ಪರಿಶುದ್ಧತೆಯನ್ನು ಹುಟ್ಟುಹಾಕಿ ನೈತಿಕಬಲವನ್ನು ಅನುಗ್ರಹಿಸುವ ಶ್ರೀವೀರಭದ್ರ ದೇವರು ಶಿವ ಸಂಸ್ಕೃತಿಯ ಸಂವರ್ಧಕರೂ ಆಗಿದ್ದಾರೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು. ಅವರು ಮಂಗಳವಾರ ಇಲ್ಲಿಗೆ ಸಮೀಪದ ಅಮ್ಮಿನಬಾವಿ ಗ್ರಾಮದ ಶ್ರೀವೀರಭದ್ರ ದೇವರ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಶ್ರೀರಂಭಾಪುರಿ ವೀರಸಿಂಹಾಸ ಮಹಾಸಂಸ್ಥಾನ ಜಗದ್ಗುರು ಪೀಠದ ಗೋತ್ರಪುರುಷನಾಗಿರುವ ಶ್ರೀವೀರಭದ್ರ ದೇವರು…