ಬೆಂಗಳೂರು :ಎರಡು ವರುಷದ ನಂತರ ಶಾಲೆಗಳು ಆರಂಭಗೊಂಡಿವೆ.ಸರಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸಿಹಿ‌ ಸುದ್ದಿಯೊಂದನ್ನು ನೀಡಿದೆ.

ಹೌದು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ 2021-22 ನೇ ಸಾಲಿನ ಅನುದಾನ ಬಿಡುಗಡೆಯಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣೆಗಾಗಿ ಪ್ರತಿ ವರ್ಷ ಕೇಂದ್ರ ಶಿಕ್ಷಣ ಮಂತ್ರಾಲಯ ಅನುಮೋದನೆಯೊಂದಿಗೆ ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯಿಂದ ಅನುನುದಾನ ಬಿಡುಗಡೆ ಮಾಡಲಾಗುತ್ತಿತ್ತು.

2021-22 ನೇ ಶೈಕ್ಷಣಿ ಸಾಲಿನ ಪಿಎಬಿಯ ಅನುಮೋದಿತ ಅನುದಾನದಲ್ಲಿ ಶೇ. 25 ರಷ್ಟು 21,573 ಪ್ರಾಥಮಿಕ ಶಾಲೆಗಳಿಗೆ (6-8ನೇ ತರಗತಿ) 1147.99 ಲಕ್ಷಗಳನ್ನು ಮತ್ತು 5,248 ಸರ್ಕಾರಿ ಸೆಕೆಂಡರಿ ಶಾಲೆಗಳಿಗೆ 687.99 ಲಕ್ಷಗಳನ್ನು ಶಾಲೆಗಳ ಎಸ್ ಡಿಎಂಸಿ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published.

Wordpress Social Share Plugin powered by Ultimatelysocial
WhatsApp
error: Content is protected !!