ಬೆಂಗಳೂರು: ಶಿಕ್ಷಕರ‌ ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.‌ ಈ ನಡುವೆ ಕೆಲವೊಂದಿಷ್ಟು ಗೊಂದಲಗಳು ಶಿಕ್ಷಕರನ್ನು ಕಾಡುತ್ತಿವೆ. ಶಿಕ್ಷಕರ ಸಮಸ್ಯೆಗಳನ್ನು ಮಾನ್ಯ ಸರಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷರ ಗಮನಕ್ಕೆ ತರಲಾಗಿತ್ತು.

ನಿನ್ನೆಯಿಂದ ಸಾವಿರಾರು ಜನ ರಾಜ್ಯದ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಶಿಕ್ಷಕರು ದೂರವಾಣಿಯ ಮೂಲಕ ಸಂಘಕ್ಕೆ ಒತ್ತಡ ಹಾಗೂ ಮನವಿಯನ್ನು ಸಲ್ಲಿಸುತ್ತಾ, ಶಿಕ್ಷಣ ಇಲಾಖೆಯು ಇತ್ತೀಚೆಗೆ ನೀಡಿರುವ ಸ್ಪಷ್ಟಿಕರಣದಂತೆ ಆಯಾ ತಾಲ್ಲೂಕಿನ (Working strength)ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆಯನ್ನು ಆಧರಿಸಿದಾಗ ಬಹಳಷ್ಟು ತಾಲ್ಲೂಕುಗಳ ಶಿಕ್ಷಕರಿಗೆ ವರ್ಗಾವಣೆ ಆವಕಾಶಗಳು ಸಿಗದೇ ವಂಚಿತರಾಗುತ್ತಿರುವ ಅಂಶವನ್ನು ಸಂಘದ ಗಮನಕ್ಕೆ ತಂದಿರುತ್ತಾರೆ.

ಈಗಾಗಲೇ ಆದೇ ತಾಲ್ಲೂಕುಗಳಲ್ಲಿ ಕಡ್ಡಾಯ /ಹೆಚ್ಚುವರಿ ವರ್ಗಾವಣೆಗೆ ಅವಕಾಶಗಳನ್ನು ನೀಡಿದ್ದು, ಈಗ ನಮಗೆ ನೀಡದಿರುವುದು ನೋವಿನ ಸಂಗತಿ ಎಂಬ ಅಂಶವನ್ನು ರಾಜ್ಯದ ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಕಾರ್ಯದರ್ಶಿ/ಆಯುಕ್ತರಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಗಮನಕ್ಕೆ ತಂದಾಗ ಅವರುಗಳು ಸಹ ಈ ಬಗ್ಗೆ ಸಹಾನುಭೂತಿಯಿಂದ ಸಹಕರಿಸಿರುತ್ತಾರೆ.

ದಿನಾಂಕ:24-11-2021ರಂದು ನಡೆಯಲಿರುವ ವರ್ಗಾವಣೆ ಪ್ರಕ್ರಿಯೆಯಲ್ಲಿ ತಾಲ್ಲೂಕುಗಳ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಿಗೆ ಬದಲಾಗಿ ಆಯಾ ತಾಲ್ಲೂಕುಗಳಲ್ಲಿನ (sanction strength) ಮಂಜೂರಾದ ಹುದ್ದೆಗಳಿಗೆ ಎಂಬ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ವಿನಂತಿಸಿದಾಗ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿ, sanction strength ಗಳ ಆಧಾರದ ಮೇಲೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿರುತ್ತಾರೆ.

ಸಾಕಷ್ಟು ಗೊಂದಲ-ನೋವಿನದಲ್ಲಿದ್ದ ಶಿಕ್ಷಕರಿಗೆ ಇದರಿಂದ ವರ್ಗಾವಣೆ ಆವಕಾಶಗಳು ಸಿಗಲಿವೆ. ಈ ಪ್ರಕ್ರಿಯೆಗಳನ್ನು ಮಾಡಲು ಸಮಯವಕಾಶ ಬೇಕಾಗಿರುವುದರಿಂದ ನಾಲ್ಕು ದಿನಗಳ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಬೇಕಾಬಹುದು.

ಮೇಲ್ಕಂಡ ಎಲ್ಲಾ ಅಂಶಗಳನ್ನು ತಮ್ಮಗಳ ಆದ್ಯ ಗಮನಕ್ಕೆ ತರಬಯಸುತ್ತಾ, ದಯಮಾಡಿ ಸಹಕರಿಸಲು ವಿನಂತಿಸಿದೆ.

ಈ ಕಾರ್ಯಕ್ಕೆ ಸಹಕರಿಸಿದ ಮಾನ್ಯ ಗೌರವಾನ್ವಿತ ಶಿಕ್ಷಣ ಸಚಿವರಿಗೆ ಸರ್ಕಾರದ ಕಾರ್ಯದರ್ಶಿಗಳಿಗೆ/

ಆಯುಕ್ತರಿಗೆ ಆಭಿನಂದನೆಗಳನ್ನು ಸಿ ಎಸ್ ಷಡಕ್ಷರಿಯವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Follow by Email
YouTube
WhatsApp
error: Content is protected !!