ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ
ಪರೀಕ್ಷಾ ಸಿದ್ಧತೆ ಹೀಗಿರಲಿ……
(ಇದು ಎಲ್ಲ ಪರೀಕ್ಷೆಗಳಿಗೂ ಅನ್ವಯಿಸುತ್ತದೆ.)
ಉತ್ತಮ ಅಂಕಗಳಿಸುವ ಸುಲಭೋಪಾಯಗಳು..
ಪ್ರೀತಿಯ ವಿದ್ಯಾರ್ಥಿಗಳೇ,
ಈಗ 1 ನೇ ತರಗತಿಯಿಂದ ಪದವಿ ಹಂತದವರೆಗೂ ಪರೀಕ್ಷಾ ಪರ್ವ ಕಾಲ.
ಈ ಪರೀಕ್ಷಾ ಸಿದ್ಧತೆ ಚೆನ್ನಾಗಿದ್ದರೆ ನಮಗೆ ಯಶಸ್ಸು ಖಂಡಿತ ಅಲ್ಲವೇ….
ನೀವೆಲ್ಲ ಈಗ ಪರೀಕ್ಷೆಯ ಭಯದಲ್ಲಿದ್ದೀರಿ.ಈ ಭಯವನ್ನೇ “ಸೂಪರ್ ಸಿಂಡ್ರೋಮ್” ಎನ್ನುತ್ತಾರೆ.
ಈ ಭಯದಲ್ಲಿರುವ ಮಕ್ಕಳು ಬುದ್ಧಿವಂತರಾಗಿದ್ದರೂ ಆತ್ಮವಿಶ್ವಾಸ ಮತ್ತು ಧೈರ್ಯದ ಕೊರತೆಯನ್ನು ಹೊಂದಿರುತ್ತಾರೆ.
ಇದು ಬಹಳ ಅಪಾಯಕಾರಿ.
ಹಾಗಾದರೆ ಉತ್ತಮ ಅಂಕಗಳಿಸಿ ನಮ್ಮ ಗುರಿ ತಲುಪಲು ನಮ್ಮ ಪರೀಕ್ಷಾ ಸಿದ್ಧತೆ ಹೇಗಿರಬೇಕು ಎಂಬುದನ್ನು ತಿಳಿಯೋಣ.
ಇಲ್ಲಿ ನಾನು ಮುಖ್ಯವಾಗಿ ಓದುವ ಹಾಗೂ ನೆನಪಿಟ್ಟುಕೊಳ್ಳುವ
ಕೆಲವು ವಿಧಾನಗಳ ಬಗ್ಗೆ ನಿಮಗೆ ತಿಳಿಸುತ್ತೇನೆ.
ಇದು ಎಲ್ಲ ಹಂತದ ವಿದ್ಯಾರ್ಥಿಗಳಿಗೂ ಉಪಯುಕ್ತವಾಗುತ್ತದೆ
ಎಂಬ ಆಶಾಭಾವ ನನ್ನದು.
ಸರಳ ವಿಧಾನಗಳು
1 ನೀವು ಓದುವ ವಿಷಯಗಳ ಆಳ ಗುರುತಿಸಿಕೊಳ್ಳಿ.
ಮೊದಲು ನಮಗೆ ಸರಳವೆನಿಸುವ ವಿಷಯಗಳನ್ನು ಗುರುತಿಸುವುದು.ಹಾಗೂ ಕಠಿಣ ವಿಷಯಗಳ ಪಟ್ಟಿ ಮಾಡುವುದು.ಅದಕ್ಕೆ ತಕ್ಕಂತೆ ವೇಳಾಪತ್ರಿಕೆ ತಯಾರಿಸಿಕೊಳ್ಳುವುದು
2 PRIVIEW
THE VIEW ,
REVIEW .
PREVIEW ಅಂದರೆ ತರಗತಿಯಲ್ಲಿ ಅಂದು ಹೇಳುವ ವಿಷಯವನ್ನು ಮುಂಚೆಯೇ ಓದಿಕೊಂಡು ಕಠಿಣ ಅಂಶಗಳನ್ನು√ (ಟಿಕ್) ಹಾಕಿಕೊಳ್ಳುವುದು.
THE VIEW.
ಹೀಗೆ ಗುರುತಿಸಿದ ಕಠಿಣ ಅಂಶಗಳನ್ನು ಶಿಕ್ಷಕರು ಅಥವಾ ಸಹಪಾಠಿಗಳೊಂದಿಗೆ ಕೇಳಿ ತಿಳಿದುಕೊಳ್ಳುವುದು.ಶಿಕ್ಷಕರು ಪಾಠ ಮಾಡುವಾಗ ಟಿಪ್ಪಣಿ ಮಾಡಿಕೊಳ್ಳುವುದು.
REVIEW . ಅಂದರೆ ಈಗಾಗಲೇ ಓದಿ,ಕೇಳಿದ ಪಾಠದ ಮೇಲೆ ಮತ್ತೊಮ್ಮೆ ಗಮನಹರಿಸಿ ಟಿಪ್ಪಣಿ ತೆಗೆಯುವುದು.
3 ಸೂತ್ರಗಳ ಸರದಾರ
ಕಠಿಣ ವಿಷಯಗಳ ಲಕ್ಷಣಗಳ,ಮುಖ್ಯ ಅಂಶಗಳ ಸೂತ್ರ ತಯಾರಿಸಿ ದಿನಾಲೂ ಓದುತ್ತಿರಬೇಕು.ಹಾಗೂ ನೀವು ಅಭ್ಯಾಸಕ್ಕೆ ಕೂಡುವ ಸ್ಥಳದಲ್ಲಿ ಅಂಟಿಸಬೇಕು.
4 _PLATE ಈ ಮಾನಸಿಕ ವ್ಯಾಧಿಗೆ ಒಳಗಾಗದಂತೆ ದೂರವಿರಬೇಕು.ಹಾಗಾದರೆ ಏನಿದು?
P= Postponement ಮುಂದೂಡುವ ಪ್ರವೃತ್ತಿ
L = Laziness . ಆಲಸ್ಯತನ
A . = Absentia ಗೈರು ಹಾಜರಿ
T . = Television . Tv ನೋಡುವಿಕೆ
E . = Excess sleep
ಅತಿಯಾದ ನಿದ್ದೆ.
ಟಿ ವಿ, ಮೊಬೈಲ್ ನೋಡದಂತೆ ನೀವೇ ಪ್ರತಿಜ್ಞೆ ಮಾಡಿಕೊಳ್ಳಬೇಕು.
5 HOPE
ನೀವು ಬರೆಯುವ ಪರೀಕ್ಷೆ ಯಾವುದೇ ಇರಲಿ ಜಯಗಳಿಸಬೇಕಾದರೆ ಈ HOPE ನಿಮ್ಮೊಂದಿಗಿರಲಿ.
H -High vision
O.- Overcome attractions
P.- Positive thinking
E-. Effective Relations
Neurologist Linguistic Programming
ಎಂಬ ವಿಜ್ಞಾನದಲ್ಲಿ
ರಿಚರ್ಡ್ ಬೈಂಡ್ಲ್ಯಾರ್ ಎಂಬುವರು ಒಂದು ಶಬ್ದವನ್ನು ಪ್ರಯೋಗಿಸಿದ್ದಾರೆ.ಅದುವೇ No pain No gain ಅಂದರೆ ಕಷ್ಟ ಪಡದೇ ಸುಖವಿಲ್ಲ ಎಂದು.
ಆದ್ದರಿಂದ ಓದಿನ ಸಮಯದಲ್ಲಿ ಮೊಬೈಲ್,ಕ್ರಿಕೆಟ್, ಪ್ರೀತಿ,ಪ್ರೇಮ ಕೆಲಸಕ್ಕೆ ಬಾರದ ದಿನಾಚರಣೆಗಳನ್ನು,ಕೆಟ್ಟ ಸ್ನೇಹಿತರನ್ನು ದೂರವಿರಿಸಿ.ಆತ್ಮವಿಶ್ವಾಸ ದಿಂದ ಸರಳವಾಗಿ ಓದಿ.
6 ನಿಮ್ಮ ಯಶಸ್ಸಿನ ಪಟ್ಟಿ ಹೀಗಿರಲಿ …
ಓದಿನ ಜೊತೆಗೆ ನಾವು ಮನೆಗೆಲಸವನ್ನೂ ಮಾಡಬೇಕಾಗುತ್ತದೆ.
ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿಕೊಳ್ಳಬೇಕು.
ಇಲ್ಲಿ ಅಂತಹ ಪಟ್ಟಿ ಇದೆ ಪ್ರಯತ್ನಿಸಿ.
ಕೆಲವು ಕೆಲಸಗಳು ಅತೀ ಮುಖ್ಯ ಹಾಗೂ ಅತೀ ಜರೂರ್ ಆಗಿರುತ್ತವೆ.ಅವೆಂದರೆ…
ನಮ್ಮ ಆರೋಗ್ಯ,
ದಿನಕ್ಕೆ 4 ತಾಸು ಅಧ್ಯಯನ,
ಕಠಿಣ ವಿಷಯಗಳ ಕಡೆಗೆ ಗಮನಕೊಡುವುದು.
ಸಾದ್ಯವಾದಷ್ಟು ಮನೆಗೆಲಸ.
ಕೆಲವು ಕಾರ್ಯಗಳು
ಜರೂರವೂ ಅಲ್ಲ,ಮುಖ್ಯವೂ ಅಲ್ಲ ಅವೆಂದರೆ… ಸಿನೆಮಾ,ಟಿವಿ,ಪ್ರೀತಿ,ಪ್ರೇಮ,
ಹರಟೆ,ತಿರುಗಾಟ,
ಮೋಜು-ಮಸ್ತಿ ಇವನ್ನೆಲ್ಲ ಬಿಡಬೇಕು.
ಹೀಗೆ ನಮ್ಮ ಯಶಸ್ಸಿಗೆ ಪೂರಕವಾದ
ಅಂಶಗಳತ್ತ ಚಿತ್ತವಿಟ್ಟು ನಮ್ಮ ಗುರಿಯನ್ನು ತಲುಪಬೇಕು.
ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕೇವಲ ಶಿಸ್ತುಬದ್ಧ ಅಧ್ಯಯನ ಅಷ್ಟೇ ಸಾಲದು.ನಿಮ್ಮ ಮಾನಸಿಕ ಸಿದ್ಧತೆ ಮತ್ತು ಆರೋಗ್ಯವು ಬಹು ಮುಖ್ಯ.
ಹಾಗಾದರೆ……………
ಮಾನಸಿಕ ಸಿದ್ಧತೆ ಹೇಗಿರಬೇಕು??????
ಬಿಡುವಿಲ್ಲದೇ ಒಂದೇ ಸಮನೆ
5 ರಿಂದ 6 ಗಂಟೆಗಳ ಕಾಲ ಓದಿದರೆ ಆಯಾಸವಾಗುತ್ತದೆ.
ಹಾಗೂ ಓದಿದ್ದು ನೆನಪಿನಲ್ಲಿ ಉಳಿಯದು.ಹಾಗಾದರೆ ದಣಿವು,ಆಯಾಸ ನಿವಾರಣೆಗೆ ಮತ್ತು ಉತ್ತಮ ಮಾನಸಿಕ ಸಿದ್ಧತೆಗೆ ಈ ಕ್ರಮಗಳನ್ನು ಅನುಸರಿಸಿ.
1 ಚೆನ್ನಾಗಿ ಬೆಳಕು,
ಗಾಳಿ ಇರುವ ಶಾಂತ ಪರಿಸರದಲ್ಲಿ ಓದಿ.
2 ಕೋಣೆಯಲ್ಲಿ ಅತಿಯಾದ ಚಳಿ ಅಥವಾ ಸೆಕೆ ಇರಬಾರದು.
3 ಪ್ರತಿ 1 ಗಂಟೆಯ ನಿರಂತರ ಓದಿನ ನಡುವೆ 2 ರಿಂದ 3 ನಿಮಿಷಗಳ ವಿಶ್ರಾಂತಿ ಇರಲಿ.
4 ಒಂದು ಕಡೆ ಕುಳಿತು ಹೆಚ್ಚೆಂದರೆ 2 ಗಂಟೆ ಓದಬೇಕು
ವಾರಕ್ಕೆ ಒಂದು ದಿನ ಓದಿಗೆ ಬ್ರೇಕ್ ನೀಡಿ ಉತ್ತಮ ಚಟುವಟಿಕೆಯಲ್ಲಿ ಮನೆಯವರೊಂದಿಗೆ ಹೊರಸಂಚಾರದದಲ್ಲಿ ಭಾಗವಹಿಸಿ.
5 ಸರಿಯಾದ ಸಮಯಕ್ಕೆ, ಸರಿಯಾದ ಆಹಾರ ಸೇವನೆ,ಸರಿಯಾದ ನಿದ್ರೆ,ಲಘು ವ್ಯಾಯಾಮ ರೂಢಿಸಿಕೊಳ್ಳಬೇಕು.
6 ಸಿಗರೇಟ್ ಮಾದಕ ವಸ್ತು, ಟಿ ವಿ ,ಮೊಬೈಲ್,ಇತರೆ ಅನವಶ್ಯಕ ಚಟುವಟಿಕೆಯಿಂದ ದೂರವಿರಿ.
7 ನೀವು ಯಾವ ಕೋರ್ಸ,ಡಿಗ್ರಿ ಆಯ್ಕೆ ಮಾಡಿಕೊಂಡಿರುವಿರೋ ಅದನ್ನು ಸಾಧಿಸುವವರೆಗೆ ಕೈ ಬಿಡಬೇಡಿ.
◆ ಪಾಲಕರ ಪಾತ್ರ◆
ಪರೀಕ್ಷಾ ಯಶಸ್ಸು ಕೇವಲ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ. ಇದರಲ್ಲಿ ಪಾಲಕರ ಪಾತ್ರವೂ ಬಹು ಮುಖ್ಯವಾಗಿದೆ.
◆ ನಿಮ್ಮ ಮಗು ಪರೀಕ್ಷಾ ತಯಾರಿಯಲ್ಲಿದ್ದರೆ ಕೆಲಸದ ಹೊರೆ ಕಡಿಮೆ ಮಾಡಿ
ಶಾಲೆಗೆ ಆಗಾಗ ಭೇಟಿ ನೀಡಿ ಮಕ್ಕಳ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ.
◆ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಮಗುವಿಗೆ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ, ಸರಿಯಾದ ನಿದ್ರೆ,ಒಳ್ಳೆಯ ಪರಿಸರವನ್ನು ಒದಗಿಸಿ.
◆ ಮನರಂಜನೆ ಅಂಶಗಳಾದ ಮದುವೆ,ಪಾರ್ಟಿ,ಜಾತ್ರೆ, ಇನ್ನಿತರ ಅನವಶ್ಯಕ ಕೆಲಸಗಳಿಂದ ದೂರವಿರಿ.
ಮಗು ವಿಗೆ ಓದಲು ಸಾಕಷ್ಟು ಗಾಳಿ ಬೆಳಕು ಇರುವ ಪ್ರಶಾಂತ ಕೋಣೆ ಯನ್ನು ಒದಗಿಸಿ.
◆ ಅವರೊಂದಿಗೆ ಅವರ ಅಭ್ಯಾಸದ ಬಗ್ಗೆ ಚರ್ಚಿಸಿ.ಮಾರ್ಗದರ್ಶನ ನೀಡಿ.
ಜೊತೆಯಿರುವೆ ಎಂಬ
ಆಪ್ತಭಾವ ಮೂಡಿಸಿ.
ಹೀಗೆ ಪಾಲಕರು ತಮ್ಮ ಮಗುವಿಗೆ ಉತ್ತಮ ಸೌಲಭ್ಯ ನೀಡಿದರೆ ಉತ್ತಮ ಫಲಿತಾಂಶ ಸಾದ್ಯ. ಅವರಿಗೆ ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ಒತ್ತಡವಾಗದಂತೆ ಪ್ರೀತಿಯಿಂದ ಅವರಿಗೆ ಮಾರ್ಗದರ್ಶನ ನೀಡಿ.ಹೆಚ್ಚು ಫಲಿತಾಂಶಕ್ಕೆ ಅತಿಯಾದ ಒತ್ತಡ ಬೇಡ.
ನಿಮ್ಮ ಮಗುವನ್ನು ಎಂದೂ ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ.
ಕೊನೆಯಹನಿ…
ಪ್ರೀತಿಯ ವಿದ್ಯಾರ್ಥಿಗಳೇ ಒತ್ತಡ ನಿವಾರಣೆಗೆ ಹಾಗೂ ಪರೀಕ್ಷಾ ಸಿದ್ಧತೆಗೆ ಕೆಲವು ಮುಖ್ಯ ಅಂಶಗಳನ್ನು ಮಾತ್ರ ಇಲ್ಲಿ ಚರ್ಚಿಸಿದ್ದೇನೆ.ನಿಮ್ಮ ಕನಸುಗಳನ್ನು ಗಟ್ಟಿ ಮಾಡಿಕೊಂಡು ಬೆನ್ನಟ್ಟಿ ನೀವು ಸಾಧಿಸಬೇಕೆಂದಿರುವ ಗುರಿಯನ್ನು ಎಂತಹ ಪರಿಸ್ಥಿತಿಯಲ್ಲೂ ಬಿಡಬೇಡಿ.
ಕಷ್ಟಪಟ್ಟು ಓದದೇ,ಇಷ್ಟಪಟ್ಟು ಓದಿ,
ನಿಮ್ಮ ಗುರಿ ಸಾಧಿಸಿ.
ಎಲ್ಲರಿಗೂ ಒಳ್ಳೆಯದಾಗಲಿ…
ಲೇಖಕರು,
ಶ್ರೀಮತಿ ಮೀನಾಕ್ಷಿ ಸುರೇಶ ಭಾಂಗಿ(ಸೂಡಿ).
ಹವ್ಯಾಸಿ ಬರಹಗಾರ್ತಿ,ಸಾಹಿತಿ
ಪ್ರೌಢಶಾಲಾ ಶಿಕ್ಷಕಿ,
ದೇವಗಾಂವ ಚನ್ನಮ್ಮನಕಿತ್ತೂರು
ಬೆಳಗಾವಿ ಜಿಲ್ಲೆ.
ಫೋನ್ 8073946046
(ವಿದ್ಯಾರ್ಥಿಗಳಿಗೆ ನೇರವಾಗಿ ತಿಳಿಸಬಯಸುವವರು ಸಂಪರ್ಕಿಸಿ.)
ಗ್ರಂಥ ಋಣ
ಆರ್ ಪಟ್ಟಾಭಿರಾಮ್
(ಕಷ್ಟಪಟ್ಟು ಓದದೇ,ಇಷ್ಟಪಟ್ಟು ಓದಿ)