ಸಾವಿತ್ರಿ ಬಾಯಿ ಪುಲೆ ಜಯಂತಿ ಆಚರಣೆ
ಸವದತ್ತಿ.: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ದಲ್ಲಿ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚಾರಣೆ ಆಚರಿಸಲಾಯಿತು. ಈ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ “೧೯ ನೇ ಶತಮಾನದ ಭಾರತೀಯ ಸಮಾಜಕ್ಕೆ, ವಿಶೇಷವಾಗಿ ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯ ಕ್ಷೇತ್ರದಲ್ಲಿ ಸಮಾಜಕ್ಕೆ, ಸಾವಿತ್ರಿಬಾಯಿ ಫುಲೆ ಕೊಡುಗೆ ಸ್ಮರಣೀಯ ಇಂದು ಅವರ ಕೊಡುಗೆಗಳನ್ನು ಸ್ಮರಿಸುವುದು ಸೂಕ್ತ ” ಎಂದು ತಿಳಿಸಿದರು. ಅವರು ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನಾಚಾರಣೆ ಆಚರಣೆ ಕಾರ್ಯ ಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ. ಎನ್. ಬ್ಯಾಳಿಯವರು ಮಾತನಾಡಿ “ಭಾರತ ದೇಶದ ಮೊಟ್ಟಮೊದಲ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಹಾಗೂ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸತ್ಯ ಶೋಧಕಿ ಆಧುನಿಕ ಶಿಕ್ಷಣದ ತಾಯಿ ಎಂದು ಪ್ರಖ್ಯಾತಿ ಪಡೆದ ಸಾವಿತ್ರಿಬಾಯಿ ಫುಲೆ ಅವರ ಅವರ ಜೀವನದ ಸಾಧನೆ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ರಾಜು ಭಜಂತ್ರಿ. ವೀರಯ್ಯ ಹಿರೇಮಠ. ರತ್ನಾ ಸೇತಸನದಿ.ದುರಗಪ್ಪ ಭಜಂತ್ರಿ. ವೈ. ಬಿ. ಕಡಕೋಳ. ವಿನೋದ ಹೊಂಗಲ ಮಲ್ಲಿಕಾರ್ಜುನ ಹೂಲಿ.ದ್ಯಾಮನಗೌಡ.ಗೌಡರ.ವೀರಪ್ಪ ಅವರಾದಿ.ಮಾಶಾಬಿ ಯಡೊಳ್ಳಿ. ಪ್ರವೀಣ ಬೋರಗನ್ನವರ. ನೀಲಕಂಠ ಲಂಗೂಟಿ.ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಯವರು ಪ್ರಾರ್ಥನಾ ಗೀತೆ ಹೇಳಿದರು. ವ್ಹಿ ಎಸ್ ಹಿರೇಮಠ ಸ್ವಾಗತಿಸಿದರು. ವೈ ಬಿ ಕಡಕೋಳ ನಿರೂಪಿಸಿದರು. ವಿನೋದ ಹೊಂಗಲ ವಂದಿಸಿದರು.