ಕಲಬುರಗಿ ಜಿಲ್ಲಾಧಿಕಾರಿ ಗಳಿಗೆ ಅತ್ಯಾಚಾರ ಆರೋಪಿಗೆ ಶಿಕ್ಷೆಗೆ ಗುರಿಪಡಿಸುವ ಕುರಿತು ಮಹಿಳಾ ಸಂಘಟನೆ ಯವರಿಂದ ಮನವಿ
ಕಲಬುರಗಿಃ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಎಸಗಿದ ಆರೋಪಿ ಹಾಜಿ ಮಲಂಗ್ ಗಣಿಯಾರ್ ನನ್ನು ಗಲ್ಲಿಗೇರಿಸಬೇಕು ಹಾಗೂ ಇನ್ನೂ ಎಷ್ಟು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ,ಹಾಗೂ ಆ ಶಾಲೆಯಲ್ಲಿ ಇನ್ನೂ ಎಷ್ಟು ಅಹಿತಕರ ಘಟನೆಗಳು ನಡೆದಿವೆ ಎಂದು ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನುಂ ಮೇಡಂ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘ ರಿ ಬೆಂಗಳೂರು ಜಿಲ್ಲಾ ಘಟಕ ಕಲಬುರ್ಗಿ ಹಾಗೂ ಕಲಬುರಗಿ ಯ ಸಮಸ್ತ ಪದಾಧಿಕಾರಿಗಳ ಸಮುಖದಲ್ಲಿ ಇಂದು ಸಾಯಂಕಾಲ. ಮನವಿ ಸಲ್ಲಿಸಲಾಯಿತು ಎಂದು ಕಲಬುರಗಿ ಜಿಲ್ಲೆಯ ಜಿಲ್ಲಾಧ್ಯಕ್ಷರು ನಂದಿನಿ ಸನಬಾಳ್ ತಿಳಿಸಿದರು,ಯಾವುದೇ ಕಾರಣಕ್ಕೂ ಅಹಿತಕರ ಘಟನೆ ಹಾಗೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಮ್ಮ ಸಂಘಟನೆ ಸಹಿಸುವುದಿಲ,ಹಾಗೂ ತಿಂಗಳಿಗೊಮ್ಮೆ ವಸತಿ ಶಾಲೆಯ ಮಕ್ಕಳಿಗೆ ಕೌನ್ಸ್ಲಿಂಗ್ ಮಾಡಬೇಕು ಹಾಗೂ ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.ಎಂದು ನಂದಿನಿ ಸನಬಾಳ ತಿಳಿಸಿದರು ಈ ಸಂದರ್ಭದಲ್ಲಿ ದೇವಮ್ಮಟಿ ತಹಶೀಲ್ದಾರ್, ಲತಾ, ಜಮುನಾ ಟಿಳೆ, ಮೋಹಿನಿ, ಸವಿತಾ ನಾಸಿ, ಲಲಿತಾ ಪಾಟೀಲ್, ನೀಲಾ ಒಳಕೇರಿ, ಸಮಸ್ತ ಮಹಿಳಾ ನೌಕರರು ಜಿಲ್ಲಾಧಿಕಾರಿ ಕಛೇರಿ ಉಪಸ್ಥಿತರಿದ್ದರು
.