ವಿಕಲಚೇತನರ ದಿನಾಚರಣೆ
ಯರಗಟ್ಟಿಃ “ವಿಕಲಚೇತನರು ತಮಗಿರುವ ವಿಶೇಷ ಶಕ್ತಿಯಿಂದ ಸಾಧನೆ ಮಾಡುತ್ತಿರುವರು.ಅವರ ಅಭಿವೃದ್ದಿಗೆ ಶಿಕ್ಷಣ ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಅನುದಾನ ಒದಗಿಸುತ್ತಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳಿರಿ” ಎಂದು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ ಕರೆ ನೀಡಿದರು.
ಅವರು ಯರಗಟ್ಟಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಜರುಗಿದ ವಿಕಲಚೇತನರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಕ್ಷಣ ಇಲಾಖೆ ಸಮನ್ವಯ ಶಿಕ್ಷಣ ಯೋಜನೆಯಡಿಯಲ್ಲಿ ವಿಕಲಚೇತನ ಮಕ್ಕಳಿಗೆ ನೀಡಲಾಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಯರಗಟ್ಟಿ ನಗರ ಪಂಚಾಯತಿಯ ಪುನರ್ವಸತಿ ಕಾರ್ಯಕರ್ತೆಯಾದ ರಷೀದಾ ಚಿಕ್ಕುಂಬಿ ಮಾತನಾಡಿ ಪಟ್ಟಣ ಪಂಚಾಯತಿಯಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಸವದತ್ತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಶಿವಾನಂದ ಮಿಕಲಿ.ಮುಖ್ಯೋಪಾಧ್ಯಾಯರಾದ ಎ ಎ ಮಕ್ಕುಮನವರ.ಶಿಕ್ಷಕಿಯರಾದ ನಾಗಮ್ಮ ಕುರಿ.ಭಾರತಿ ನಿರ್ವಾಣಿ.ಜಯಶ್ರೀ ಬಡಕಪ್ಪನವರ.ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಜರುಗಿತು.ಶಿಕ್ಷಕಿ ಜಯಶ್ರೀ ಬಡಕಪ್ಪನವರ ಸ್ವಾಗತಿಸಿದರು.ಭಾರತಿ ನಿರ್ವಾಣಿ ನಿರೂಪಿಸಿದರು.ನಾಗಮ್ಮ ಕುರಿ ವಂದಿಸಿದರು.