ಸ್ವಗ್ರಾಮದ ಸನ್ಮಾನಕ್ಕೆ ಬಾಜನರಾದ
ಕವಿಯತ್ರಿ, ಮೀನಾಕ್ಷಿ ಸೂಡಿ
ಚೆನ್ನಮ್ಮನ ಕಿತ್ತೂರು; ತಾಲೂಕಿನ ದೇವಗಾಂವ್
ಗ್ರಾಮದ ನಿವಾಸಿ ಬರಹಗಾರ್ತಿ, ಲೇಖಕಿ, ಶ್ರೀಮತಿ ಮೀನಾಕ್ಷಿ ಸುರೇಶ ಭಾಂಗಿ(ಸೂಡಿ) ಇವರನ್ನು “ಮಹಿಳಾರತ್ನ” ಪ್ರಶಸ್ತಿ ಪಡೆದ ಪ್ರಯುಕ್ತ ಹಾಗೂ ಸಾಹಿತ್ಯಲೋಕಕ್ಕೆ ತಮ್ಮ ಅಮೂಲ್ಯ ಕವನ ಸಂಕಲನ ಅರ್ಪಣೆ ಗೊಳಿಸಿದ್ದಕ್ಕೆ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಒಟ್ಟಾರೆ ಒಳ್ಳೆಯ ಕಾರ್ಯವನ್ನು ಗುರುತಿಸಿ ಗ್ರಾಮದ ಸಮಸ್ತ ನಾಗರಿಕ ವೃಂದದವರು ಇವರನ್ನು ಗೌರವದಿಂದ ಸನ್ಮಾನಿಸಿದರು.
ದಿನಾಂಕ 12./11/.2024 ರಂದು ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೀನಾಕ್ಷಿ ಅವರು ಸ್ವಂತ ಗ್ರಾಮದ ಈ ಪ್ರೀತಿಯ ಸನ್ಮಾನ ಎಲ್ಲ ಪ್ರಶಸ್ತಿಗಿಂತಲೂ ಮಿಗಿಲು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ದೇವಗಾಂವ್ ಗ್ರಾಮದ ಸಮಸ್ತ ನಾಗರಿಕರು, ಗುರು-ಹಿರಿಯರು ಹಾಗೂ ಕಲ್ಮೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟನ ಎಲ್ಲ ಸದಸ್ಯರು ಹಾಜರಿದ್ದರು.