ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು
ಸವದತ್ತಿ : ತಾಲೂಕಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ರವರ ನೇತೃತ್ವದಲ್ಲಿ ಪುನರ್ ರಚಿಸಲಾಯಿತು. ಆರ್ ಸಿ ರಾಠೋಡ – ಅಧ್ಯಕ್ಷರು, ವಾಯ್ ಎಂ ಶಿವಬಸಣ್ಣವರ – ಗೌರವಾಧ್ಯಕ್ಷರು, ಮಮತಾ. ಎನ್ ಬಣಕಾರ- ಉಪಾಧ್ಯಕ್ಷರಾಗಿ ಎ ಎಂ ನದಾಫ್- ಖಜಾಂಚಿಯಾಗಿ, ಬಿ ಆಯ್ ಜಮಾದಾರ್- ಪ್ರಧಾನ ಕಾರ್ಯದರ್ಶಿಯಾಗಿ, ಆರ್ ಎಫ್ ಮಾಗಿ- ಸಂಘಟನಾ ಕಾರ್ಯದರ್ಶಿಯಾಗಿ, ಎಮ್ ವಾಯ್ ಇಂಗಳೇಶ್ವರ ಹಾಗೂ ಶಂಕರ್ ದೇವನ್ನವರ ಸಹ ಕಾರ್ಯದರ್ಶಿಯಾಗಿ. ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ ಬಿ ಕೊಪ್ಪದ, ಮುಖ್ಯೋಪಾಧ್ಯಾಯರಾದ ವ್ಹಿ ಬಿ ಫಡಿ, ಪ್ರಮೋದ್ ದೇಶಪಾಂಡೆ, ಶ್ರೀಕಾಂತ್ ಯರಡ್ಡಿ, ಕಾಡನ್ನ ವರ, ಗುಡುದಪ್ಪನವರ್ ಮುಂತಾದವರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲರನ್ನೂ ಅಭಿನಂದಿಸಿ,ಮಾತನಾಡಿ “ಸಂಘದ ಚಟುವಟಿಕೆಗಳಿಗೆ ತಮ್ಮ ಸಹಕಾರವಿದ್ದು,ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಅನುಷ್ಠಾನಗೊಳಿಸಲು” ಕರೆ ನೀಡಿದರು.