ಸರ್ಕಾರಿ ನೌಕರರ ಸಂಘದ ಚುನಾವಣೆ -2024. ರಾಜ್ಯಾಧ್ಯಾಂತ ಪ್ರಜಾಸತಾತ್ಮಕ ನೌಕರರ ವೇದಿಕೆಯ ಮೇಲುಗೈ
ದಿನಾಂಕ *11/11/2024* ರಂದು ಅವಿರೋಧ ಆಯ್ಕೆಯಾದ 54 ತಾಲೂಕಗಳ ಪದಾಧಿಕಾರಿಗಳಲ್ಲಿ 45 ತಾಲೂಕುಗಳಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಪದಾಧಿಕಾರಿಗಳು ಆಯ್ಕೆಯಾಗುವ ಮೂಲಕ ನವ್ಯ ಭಾಷ್ಯಕ್ಕೆ ಅಡಿಪಾಯ ಹಾಕಿದ್ದರು.
ಈ ದಿನ ನಡೆದ ಬಾಕಿ ಉಳಿದ 133 ತಾಲೂಕು/ಯೋಜನಾ ಶಾಖೆಗಳ ಚುನಾವಣೆಯಲ್ಲಿ , 93 ರಲ್ಲಿ ಪೂರ್ಣ ಪ್ರಮಾಣ ಮತ್ತು 18 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭಾಗಶಃ ಆಗಿ ತಾಲೂಕು/ಯೋಜನೆ ಶಾಖೆ ಅದ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಪ್ರಜಾಸತ್ತಾತ್ಮಕ ನೌಕರ ವೇದಿಕೆಯ ಮತ್ತು ಬೆಂಬಲಿತರು ಆಯ್ಕೆಯಾಗುವ ಮೂಲಕ ಪ್ರಜಾಸತ್ತಾತ್ಮಕ ನೌಕರರ ವೇದಿಕೆಗೆ ಭಾರಿ ಮುನ್ನಡೆಯ ಆರಂಬಿಕ ಗೆಲುವನ್ನು ದಾಖಲಿಸಿದ್ದಾರೆ.
ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರು/ನೌಕರರು, ಉಪನ್ಯಾಸಕರು, ಕಂದಾಯ, ಆರೋಗ್ಯ ಇಲಾಖೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ, ಅದರಲ್ಲೂ ಎನ್ ಪಿ ಎಸ್ ನವರು ಆಯ್ಕೆ ಆಗುವ ಮೂಲಕ ಪ್ರಜಾಸತ್ತಾತ್ಮಕ ನೌಕರರ ವೇದಿಕೆಗೆ ಶಕ್ತಿ ತುಂಬಿರುತ್ತಾರೆ.
*ಮಂಡ್ಯ* ಮತ್ತು *ಶಿವಮೊಗ್ಗೆ* ಜಿಲ್ಲಾ ಶಾಖೆಯ ಚುನಾವಣೆ ಈಗ ಕೇವಲ ಔಪಚಾರಿಕ ಮಾತ್ರ ಎನಿಸಿಬಿಟ್ಟಿದ್ದು, ಬಾಕಿ ಉಳಿದ ಇಂದಿನ 28 ಜಿಲ್ಲೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯ ಮತ ಎಣಿಕೆ ಮುಗಿದ ಸಂಜೆ 5.30 ರವರೆಗೆ, 21 ಕ್ಕೂ ಅಧಿಕ ಕಡೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಮತ್ತವರ ಬೆಂಬಲಿತರೇ ಬಹು ಸಂಖ್ಯೆಯಲ್ಲಿ ನಿರ್ದೇಶಕರಾಗಿ ಆಯ್ಕೆ ಆಗಿದ್ದು, ಜಿಲ್ಲಾ ಶಾಖೆಗಳ ಅಧ್ಯಕ್ಷರು & ಪದಾಧಿಕಾರಿಗಳು ಇವರ ಮತ್ತು ಇವರ ಬೆಂಬಲಿತರೇ ಆಯ್ಕೆ ಆಗುವ ನಿರೀಕ್ಷೆ ಹೆಚ್ಚಿದ್ದು ವೇದಿಕೆಯ ನಾಯಕರುಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಈಗಿನ ಭರ್ಜರಿ ಮುನ್ನಡೆ ಮತ್ತು ಆಯ್ಕೆ ಆದವರ ಜೋಶ್ ನೋಡಿದಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಖಚಾಂಚಿ, ಪ್ರಧಾನ ಕಾರ್ಯದರ್ಶಿ ಯಾರೂ ಎನ್ನುವುದಕ್ಕಾಗಿ ಡಿಸೆಂಬರ್ 27 ರ ಚುನಾವಣೆವರೆಗೂ ಕಾಯಬೇಕಿಲ್ಲ ಎನ್ನುವುದು ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಮುಂಚೂಣಿ ನಾಯಕರ ಅಂಬೋಣ.
ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಮತ್ತವರ ಬೆಂಬಲಿತ ರಾಜ್ಯದ ತಾ!!ಯೋ ಶಾಖೆಯ ಅಧ್ಯಕ್ಷರು, ಖಚಾಂಚಿ, ರಾಜ್ಯ ಪರಿಷತ್ ಸದಸ್ಯರು ಇವರುಗಳಿಗೆ – ಅಧ್ಯಕ್ಷ ಅಭ್ಯರ್ಥಿ ಕೃಷ್ಣಮೂರ್ತಿ, ಖಜಾಂಚಿ ಅಭ್ಯರ್ಥಿ ಶಿವರುದ್ರಯ್ಯ ಮತ್ತು ಸಂಭವನೀಯ ಪ್ರಧಾನ ಕಾರ್ಯದರ್ಶಿ ಚಂದ್ರು ನುಗ್ಗಲಿ ಇವರು ಮತ್ತು ವೇದಿಕೆಯ *ಸಂಸ್ಥಾಪಕರಾದ* ಹೆಚ್ಕೆ ರಾಮು, ಬಸವರಾಜ ಗುರಿಕಾರ ಬಿಪಿ ಮಂಜೇಗೌಡ, ಬೈರಪ್ಪ, ಶೇಷೇಗೌಡ, ಸಣ್ಣಮುದ್ದಯ್ಯ, ದೇವಾಡಿಗ, ರಾಯಚೂರು ಪಾಷ, ಉಡುಪಿ ಸೆರೆಗಾರ, ಚಾಮರಾಜನಗರ ರಾಚಪ್ಪ, *ಸಂಚಾಲಕರಾದ* ನಿಂಗೇಗೌಡ, ಮಂಡ್ಯ ನಾಗೇಶ, ಶಾಂತಾರಾಂ, ಹರಪನಹಳ್ಳಿ ಬಸವರಾಜ ಸಂಗಪ್ಪನವರ್, ಶಿಕಾರಿಪುರ ಚಿನ್ನಪ್ಪ, ಹನುಮನಾಯಕ, ಗಂಗಾಧರ, ಪಿಡಬ್ಲ್ಯೂಡಿ ಸೋಮಣ್ಣ, ರೋಷನಿಗೌಡ, ಶಶಿಕಲಾ, ಪ್ರಕಾಶ್ ನಾಯಕ, ಬೀದರಿನ ರಾಜಕುಮಾರ ಮಾಳಗೆ, ಹುಮನಾಬಾದ್ ರವಿಂದ್ರರೆಡ್ಡಿ, ಶಿವಮೊಗ್ಗೆಯ ಮೋಹನ್ ಕುಮಾರ್, ಹಾಸನದ ಕೃಷ್ಣೇಗೌಡ ಹಾಗು ಇನ್ನಿತರರು ಶುಭ ಹಾರೈಸಿದ್ದಾರೆ.