ಶಿಕ್ಷಕರಿಗೆ ಒಳಿತಾಗುವ ಕಾರ್ಯ ಮಾಡಿ ಅಕ್ಷರತಾಯಿ ಲೂಸಿ ಸಾಲ್ಡಾನ.
ಧಾರವಾಡ
ಸಂಘಟನೆಗಳು ಯಾವುದೇ ಇರಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸತತ ಪ್ರಯತ್ನ ಮಾಡುವುದರ ಜೊತೆಗೆ ಶಿಕ್ಷಕರಿಗೆ ಹೊಸದನ್ನು ಕಲಿಯಲು ಪ್ರೇರಣೆ ನೀಡುವುದು, ಪ್ರತಿಭಾವಂತ ಶಿಕ್ಷಕರು ಮತ್ತು ಅತ್ಯುತ್ತಮ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಅಭಿನಂದನೀಯ ಎಂದು, ಮೊನ್ನೆ ತಾನೆ ಕರ್ನಾಟಕ ಸರಕಾರದ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಲೂಸಿ ಸಾಲ್ಡಾನ ಹೇಳಿದರು.
ಅವರು ಧಾರವಾಡದ ರಂಗಾಯಣದಲ್ಲಿ ಜರುಗಿದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ, ಪ್ರಧಾನ ಗುರುಗಳಿಗೆ ಕಾರ್ಯಾಗಾರ ಹಾಗೂ ಅತ್ಯುತ್ತಮ ಶಾಲೆ ಹಾಗೂ ಧಾರವಾಡ ಜಿಲ್ಲಾ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ,ಪ್ರತಿಯೊಬ್ಬರೂ ಒಳ್ಳೆಯ ಕೆಲಸ ಮಾಡುವುದರ ಮೂಲಕ ಈ ನೆಲದ ಋಣ ತೀರಿಸುವ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ನನಗೆ ಬಂದ ಪ್ರಶಸ್ತಿ ಹಣವನ್ನು ನವೆಂಬರ್ ತಾಲೂಕಿನ ತಿರ್ಲಾಪೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಉಪ್ಪಿನಬೆಟಗೇರಿಯ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ನೀಡುವೆ, ಈ ದಿನ ತಿರ್ಲಾಪೂರ ಶಾಲೆಗೆ ಚೆಕ್ ನೀಡುವೆ ಎಂದರು. ಉಪನ್ಯಾಸಕರಾಹಿ ಆಗಮಿಸಿದ್ದ ರಾಜ್ಯ ಸಂಪನ್ಮೂಲ ಶಿಕ್ಷಕ ಎಂ ಎಸ್ ಪಾಟೀಲ ಶಾಲಾಭಿವೃದ್ದಿ ಆಯಾಮಗಳು ಪೀಟರ್ ಸಿಂಗೆ ಅವರ ಸಿದ್ದಾಂತದ ಕಲಿಕಾ ಸಂಸ್ಥೆಯ ಪ್ರಮುಖ ಅಂಶಗಳಾದ, ಸ್ವ ಅಭಿವೃದ್ಧಿ, ಹಂಚಿಕೊಂಡ ದೂರದರ್ಶಿತ್ವ ಮಾನಸಿಕ ಚಿತ್ರಗಳ ಬದಲಾವಣೆ, ತಂಡ ಕಲಿಕೆ, ವ್ಯವಸ್ಥಿತ ಚಿಂತನೆ ಇವುಗಳನ್ನೂ ಅಳವಡಿಸಿಕೊಂಡು ಶಾಲಾಭಿವೃದ್ದಿ ಮಾಡಿದಲ್ಲಿ , ಪ್ರಸ್ತುತ ಶಾಲೆಗಳನ್ನು ಕಲಿಯುವ ಶಾಲೆಗಳನ್ನಾಗಿ ಮಾರ್ಪಡಿಸಬಹುದು, ಕಲಿಕಾ ಗುಣಮಟ್ಟ, ಎಲ್ಲಾ ಏಳು ಶಾಲಾ ಭಾಗೀದಾರರು ಸಕ್ರಿಯವಾಗಿ ತೊಡಗಿಸಿಕೊಂಡು ಶಾಲಾಭಿವೃದ್ದಿಗೆ ಕೈಜೋಡಿಸಿದಲ್ಲಿ ಶಾಲಾ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದರು. ವಿಜಯನಗರ ಜಿಲ್ಲೆಯ ಮಹಿಳಾ ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ, ಬಿ ಎಸ್ ಪುಷ್ಪ, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಮಹಾಪೋಷಕರು ಗೋವಿಂದ ಜುಜಾರೆ ರಾಜ್ಯ ಗೌರವಾದ್ಯಕ್ಷರು ಮಲ್ಲಿಕಾರ್ಜುನ ಉಪ್ಪಿನ ಡ್ಯಾನಿಯಲ್ ಗುಂಜಾಳ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷರಾದ ಸೋಮನಗೌಡ ಪಾಟೀಲ, ಈ ಸಂಘವನ್ನು ಆರು ವರ್ಷಗಳ ಹಿಂದೆ ನಾವುಗಳು ಹಳ್ಳಿಗಾಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುವ ಸಲುವಾಗಿ, ಅದರಲ್ಲೂ ಕಡ್ಡಾಯ ವರ್ಗಾವಣೆ ಸಮಸ್ಯೆ ಹಾಗೂ ಗ್ರಾಮೀಣ ಪರಿಹಾರ ಭತ್ಯೆ , ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಹುಟ್ಟಿಕೊಂಡ ಸಂಘ ಈದಾಗಿದೆ ಈ ಸಂಘಕ್ಕೆ ಶಿಕ್ಷಕರು ಆಜೀವ ಸದಸ್ಯತ್ವವನ್ನು ಪಡೆಯುವ ಮೂಲಕ ಸಂಘಕ್ಕೆ ಬಲ ತುಂಬಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು. ರಾಜ್ಯ ಮಹಾಪೋಷಕ ಎಲ್ ಐ ಲಕ್ಕಮ್ಮನವರ
ರಾಜ್ಯ ಪ್ರಮುಖರು ಕಲ್ಪನ ಚಂದನಕರ
ಜಿಲ್ಲಾ ಕಾರ್ಯಾಧ್ಯಕ್ಷರಾದ ವಿ ಜಿ ಮುದಿಗೌಡರ ಧಾರವಾಡ ತಾಲೂಕಿನ ಪ್ರಧಾನ ಕಾರ್ಯದರ್ಶಿ ಉದಯ ಮೊರಬ ಜಿಲ್ಲಾ ಪದಾಧಿಕಾರಿಗಳಾದ ನಾಗರತ್ನ ಅಂಚಟಗೇರಿ, ಎಚ್ ಕೆ ಸುಲ್ತಾನಪುರಿ. ಕೆ ಎಂ ರಮಜಾನಬಿ ಹುಲ್ಲೂರ ಕಲಘಟಗಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಹೇಮನಗೌಡ ಮದ್ನೂರ ಎಂ ಆರ್ ಮಾದರ ಮುಂತಾದವರು ಹಾಜರಿದ್ದರು ಶಿಕ್ಷಕಿ ಸಂಗೀತ ಮಠಪತಿ ಪ್ರಾರ್ಥಿಸಿದರು, , ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ತಾಲೂಕಿನ ಅಧ್ಯಕ್ಷರಾಗಿ ಆರ್ ಎ ಮಕಾನದಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮರಿಗೌಡ ಭೂಮನಗೌಡರ ಸ್ವಾಗತಿಸಿದರು, ಸಂಗೀತ ಮಠಪತಿ ನಿರೂಪಿಸಿದರು.ಎಂ ಎಸ್ ಅಕ್ಕಿ ವಂದಿಸಿದರು.