ರಾಜ್ಯೋತ್ಸವ ಜಾಥಾದಲ್ಲಿ ಮಕ್ಕಳಿಂದ ಕನ್ನಡ ಪುಸ್ತಕ ಪ್ರದರ್ಶನ…
ಚೆನ್ನಮ್ಮನ ಕಿತ್ತೂರು,
ತಾಲೂಕಿನ ತುರಕರಶೀಗಿಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ವಿಜೃಂಭಣೆಯಿಂದ ಜರುಗಿತು.
ಮುಖ್ಯೋಪಾಧ್ಯಾಯರಾದ ಶ್ರೀ ಮುಲ್ಲಾನವರ ಅವರು ಧ್ವಜಾರೋಹಣ ಮಾಡಿ ಮಾತಾಡಿದರು.
ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಜಾಥಾದಲ್ಲಿ ಎಲ್ಲ ವಿದ್ಯಾರ್ಥಿಗಳ ಕೈಯಲ್ಲಿ ಕನ್ನಡ ಪುಸ್ತಕ ಕೊಟ್ಟು ಗ್ರಾಮದ ತುಂಬ ಪ್ರದರ್ಶನ ಹಾಗೂ ಪರಿಚಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಮೂಡಿ ಬಂತು.
ಇದೊಂದು ವಿನೂತನ ಕನ್ನಡ ಕಾರ್ಯಕ್ರಮವಾಗಿತ್ತು.
ಮಕ್ಕಳೆಲ್ಲ ಅತ್ಯಂತ ಶಿಸ್ತಿನಿಂದ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿದ್ದರು.ಈ ಕಾರ್ಯಕ್ರಮದ ರೂವಾರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ಹಾಗೂ ಸಾಹಿತಿ ಮೀನಾಕ್ಷಿ ಸೂಡಿ ಅವರು ಈ ಯೋಜನೆಯನ್ನು ರೂಪಿಸಿ ಜಾರಿಗೆ ತಂದದ್ದು ಸಮಯೋಚಿತವಾಗಿತ್ತು.
ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.