ಸುವರ್ಣಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿಯ ಹಣವನ್ನು
ಸರಕಾರಿ ಶಾಲೆಗೆ ದತ್ತಿ ನೀಡಲು ಮುಂದಾದ ಲೂಸಿ ಸಾಲ್ಡಾನ.
ಬೆಂಗಳೂರು, ನವೆಂಬರ್ ೧
ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ನವೆಂಬರ್ ೧ ರಂದು ವಿಧಾನ ಸೌಧದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭಲ್ಲಿ, ೬೯ ಜನರಿಗೆ ರಾಜ್ಯೋತ್ಸವ ಹಾಗೂ ೧೦೦ ಜನ ವಿವಿಧ ರಂಗದ ಸಾಧಕರಿಗೆ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು, ಇದೇ ಸಂದರ್ಭದಲ್ಲಿ ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ದತ್ತಿದಾನಿ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನರವರಿಗೆ ಅವರ ಸಮಾಜಸೇವೆಗೆ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಾಡಿದರು.
ಸಮಾರಂಭ ಮುಗಿದ ಮೇಲೆ, ಎನ್ ಪಿ ಎಸ್ ನೌಕರರ ಸಂಘದ ರಾಜ್ಯ ಪ್ರಮುಖ ರಂಗನಾಥ ಜಿ ಅಕ್ಷರತಾಯಿ ಲೂಸಿ ಸಾಲ್ಡಾನರವರಿಗೆ ಶುಭಾಶಯ ಕೋರಿ ಮೆಡಂ ೧ ಲಕ್ಷ ನಗದು ಬಹುಮಾನ ಸರಕಾರ ನೀಡುತ್ತದೆಯಂತೆ ತುಂಬಾ ಸಂತಸವಾಯಿತು ಎಂದಾಗ ಇದೇ ಸಂದರ್ಭದಲ್ಲಿ ಮಾತನಾಡಿದ ಲೂಸಿ ಸಾಲ್ಡಾನ ಈ ಪ್ರಶಸ್ತಿ ಹಣವನ್ನು ನಾನು ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ನೀಡುವೆ, ಈ ಹಿಂದೆ ಪಬ್ಲಿಕ್ ಟಿವಿಯವರು ನೀಡಿದ ಪಬ್ಲಿಕ್ ಮಹಿಳೆ ಪ್ರಶಸ್ತಿ ಹಣವನ್ನು ಮುನವಳ್ಳಿಯ ಕಿವುಡ ಮೂಖ ಮಕ್ಕಳ ಶಾಲೆಯ ಮಕ್ಕಳಿಗೆ ಸ್ವೀಟರ್ ಸೇರಿದಂತೆ ಇತರ ಸಾಮಗ್ರಿಗಳನ್ನು ನೀಡಿದೆ, ಸುವರ್ಣ ಕನ್ನಡಪ್ರಭ ಎರಡು ಸಲ ಪ್ರಶಸ್ತಿ ನೀಡಿ ಗೌರವಿಸಿದ ಹಣವನ್ನು ಧಾರವಾಡದ ನಿರಾಶ್ರಿತರ ಕೇಂದ್ರದಲ್ಲಿ ಇರುವ ನಿರಾಶ್ರಿತರಿಗೆ ಪತ್ರಕರ್ತ ರವಿ ಕಗ್ಗಣ್ಣವರ ಸಲಹೆಯ ಮೇರೆಗೆ ರಗ್ಗುಗಳನ್ನು ಹಣ್ಣು ಹಂಪಲುಗಳನ್ನು ಹಾಗೂ ಧಾರವಾಡ ಅನಾಥ ಶಾಲೆಯ ಮಕ್ಕಳಿಗೆ ಊಟದ ತಟ್ಟೆಗಳನ್ನು ವಾಟೆಗಳನ್ನು ನೀಡಿದೆ ಎಂದರು.
ಇವರು ಲಕ್ಷ ಲಕ್ಷ ರೂಪಾಯಿಗಳನ್ನು ಸರಕಾರಿ ಶಾಲೆಗೆ ದತ್ತಿ ನೀಡಿದ್ದಾರೆ. ಹಾಗಂತ ಇವರು ಕೋಟ್ಯಾಧೀಶರಲ್ಲ, ನೋಡಿ ಈ ಸರಕಾರದ ಪ್ರಶಸ್ತಿಯ ನಗದು ಬಹುಮಾನವನ್ನು ಸರಕಾರಿ ಶಾಲೆಗೆ ನೀಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು ಮಾಗಡಿ ರಸ್ತೆಯ ತಾವರೆಕೆರೆಯ ಸಾಧಕಿ ಶಿಕ್ಷಕಿ ಟಿ ವೀಣಾರವರು ತಿಳಿಸಿದರು, ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾಯಿತು ಎನ್ನುವವರ ಮದ್ಯೆ ಈ ಮಹಾನ್ ತಾಯಿ ಆದರ್ಶವಾಗಿ ನಿಲ್ಲುತ್ತಿದ್ದಾರೆ, ತನಗೆ ಬರುವ ಸಂಬಳದ ಶೇಕಡಾ 90% ರಷ್ಟು ಹಣವನ್ನು ಉಳಿಸಿ ಸರಕಾರಿ ಶಾಲೆಗೆ ದತ್ತಿ ನೀಡುತ್ತಿದ್ದಾರೆ , ಅದು ಈಗ 70 ಲಕ್ಷಕ್ಕೂ ಅಧಿಕವಾಗಿದೆ ಎಂದು ಅವರ ಶಿಷ್ಯ ಶಿಕ್ಷಕ ಎಲ್ ಐ ಲಕ್ಕಮ್ಮನವರ ತಿಳಿಸಿದರು.
ನಾನು ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿರುವೆ ನನ್ನ ಕಷ್ಟ ನನ್ನ ನಾಡಿನ ಮಕ್ಕಳಿಗೆ ಬರಬಾರದು. ಮಕ್ಕಳು ಶಿಕ್ಷಣವಂತರಾದರೆ ಸ್ವಾವಲಂಬಿ ಬದುಕನ್ನು ನಿರ್ವಹಿಸುವುದರ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವರು. ಮಕ್ಕಳೇ ನನ್ನ ಆಸ್ತಿ. ಸರಕಾರಿ ಶಾಲೆಗಳು ಸೇವಾ ಸಂಸ್ಥೆಗಳೇ ನನ್ನ ಉಸಿರು ಎಂದು ಈ ಅಕ್ಷರ ಶಬರಿ ಮನತುಂಬಿ ಹೇಳುವರು.ತನಗೋಸ್ಕರ ಏನನ್ನು ಆಸ್ತಿ ಮಾಡಿಕೊಳ್ಳದ ಇವರು ಅನೇಕ ಮಕ್ಕಳ ಬದುಕಿಗೆ ಆಸರೆಯಾಗಿ ನಿಸ್ವಾರ್ಥ ಬದುಕು ನಡೆಸುತ್ತಿದ್ದಾರೆ. ಎಂದು ಅವರ ಸಿನಿಮಾ ತಯಾರು ಮಾಡಿದ ನಿರ್ದೇಶಕ ಬಾಬಾಜಾನ ಮುಲ್ಲಾ ಸಹನಿರ್ದೇಶಕ ನಂದಕುಮಾರ ದ್ಯಾಪೂರ ಅವರ ಹದಿಮೂರು ಪುಸ್ತಕಗಳನ್ನು ಮತ್ತು ಅವರ ಸಿನಿಮಾ ಕತೆಯನ್ನು ಬರೆದ ಮುನವಳ್ಳಿಯ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ತಿಳಿಸಿದರು.