ದೀಪಾವಳಿ
ಬೆಳಕಿನ ಹಬ್ಬ ದೀಪಾವಳಿ ಆಗಮನದಿ ಕಂಗೊಳಿಸುವ ಪ್ರಕೃತಿ ಮಾತೆ
ಕಾದಿರಲು ತಳಿಯ ತೊರಣದಿ
ಸುತ್ತಲೂ ಹಸಿರು
ಮನೆಯ ಸಿಂಗರಸಿ ಬಣ್ಣ ಬಣ್ಣದ ರಂಗೋಲಿ ಅಲಂಕರಿಸಿ
ಹರುಷದಿ ಕಾಯುವ ಬೆಳಕಿನ ಹಬ್ಬ ದೀಪಾವಳಿ
ಸಂಸ್ಕೃತಿ ನೆನಪಿಸುತ
ಹರುಷದಿ ಸೆಗಣಿ ಮೂರ್ತಿಯ ಪಾಂಡವರ ಆಗಮನ ಮನೆಯ ಬಾಗಿಲೊಳು ವಿವಿದೆಡೆ ಕಾಣುತ
ಧನ್ವಂತರಿ ಪೂಜೆ ಸಲ್ಲಿಸಿ ಆರೋಗ್ಯ ಭಾಗ್ಯವ ಕರುಣಿಸೆನುತ.
ಸಾಯಂಕಾಲದ ಸಮಯದೊಳು
ಬೆಳ್ಳಿ ಬಂಗಾರ ಖರೀದಿಸಿ ಉಲ್ಲಾಸದಿ ಪೂಜಿಸಿ
ದೀಪಾವಳಿ
ನೀರು ತುಂಬುವ ಹಬ್ಬ ಬರಮನ ಹಬ್ಬದ ಸಿದ್ಧತೆ
ಹಂಡೆಗೆ ಪೂಜಿಸುವ ಹಬ್ಬದ ಸಡಗರವೋ ಸಡಗರ
ಮಹಾಲಿಂಗನ ಬಳ್ಳಿಯಿಂದ
ಸಿಂಗರಿಸಿ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಹರುಷದಿ
ಸಹೋದರರಿಗೆ ಆರತಿ ಮಾಡಿ
ಕೇಳುವೆವು ಕಾಣಿಕೆ
ಚಕ್ಕುಲಿ ಲಾಡು ಕರಚಿಕಾಯಿ ಸುರುಳಿ ಹೋಳಿಗೆ ಬಗೆ ಬಗೆಯ ತಿಂಡಿಯ ಸವಿದೆವು
ಅಂಗಳದಲ್ಲಿ ದೀಪಗಳಿಂದ ರಂಗೋಲಿ ಅಲಂಕರಿಸಿ
ಲಕ್ಷ್ಮಿಯ ಪೂಜೆಯ ಮಾಡಿ ಸದಾ ನಮ್ಮ ಮನೆ ಬೆಳಕಿನಿಂದ ಸುಖ ಶಾಂತಿ ನೆಮ್ಮದಿ ಯಿಂದ ಇರಲಿ ಎಂದು ಬೇಡುತ್ತಾ
ಪ್ರಕೃತಿ ಮಾತೆಗೆ ನೇಮಿಸುವೆ
ಶ್ರೀಮತಿ ಸುನಿತಾ. ತೇಲಿ
ಚಿದಂಬರ ನಗರ
ಬೆಳಗಾವಿ