ಮೀನಾಕ್ಷಿ ಸೂಡಿಯವರ ಕವನ ಸಂಕಲನ ಲೋಕಾರ್ಪಣೆ…
ಶ್ರೀಮತಿ ಮೀನಾಕ್ಷಿ ಸೂಡಿ ಕವಯತ್ರಿ, ಹವ್ಯಾಸಿ ಬರಹಗಾರ್ತಿ ಚೆನ್ನಮ್ಮನ ಕಿತ್ತೂರು ಇವರ
..ನಾನು ಕನ್ನಡವ್ವ ಮಾತಾಡಾಕತ್ತೇನಿ….
ಎಂಬ ವಿಶೇಷ ಶಿರೋನಾಮೆಯ ಸುಂದರ ಕವನಗಳನ್ನೊಳಗೊಂಡ ಕವನ ಸಂಕಲನವು ದಿನಾಂಕ 20 /10/ 2024 ರವಿವಾರ ಬೆಳಗಾವಿಯ ಕನ್ನಡ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಕವನ ಸಂಕಲನಕ್ಕೆ ಬೆಳಗಾವಿಯ ಹಿರಿಯ ಸಾಹಿತಿಗಳಾದ ಶ್ರೀಮತಿ ಗುರುದೇವಿ ಹುಲೇಪ್ಪನವರಮಠ ಮುನ್ನುಡಿ ಬರೆದು ಹಾರೈಸಿದ್ದು,ಹಾಗೆಯೇ ಮತ್ತೋರ್ವ ಸಹೃದಯ ಸಾಹಿತಿಗಳಾದ
ಶ್ರೀಮತಿ ವಿಜಯಲಕ್ಷ್ಮಿ ಪುಟ್ಟಿ ಇವರು ಬೆನ್ನುಡಿ
ಬರೆದು ಪ್ರೋತ್ಸಾಹಿಸಿದ್ದಾರೆ.
ಈ ಕವನ ಸಂಕಲನವನ್ನು ಯುವಕವಯತ್ರಿ ಶಬಾನಾ ಅಣ್ಣಿಗೇರಿ ಅವರು ಸುಂದರವಾಗಿ ಪರಿಚಯಿಸಿದ್ದಾರೆ.
ಈ ಕವನ ಸಂಕಲನದ ಅನೇಕ ಕವನಗಳು ಕರ್ನಾಟಕದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆಯಲ್ಲದೆ ಅನೇಕ ಕವಿಗೋಷ್ಠಿಗಳಲ್ಲಿ ಮೆಚ್ಚುಗೆ ಹಾಗೂ ನಗದು ಬಹುಮಾನ ಪಡೆದಿವೆ. ಸುಂದರ ಶೀರ್ಷಿಕೆ ಹೊಂದಿದ ಹಾಗೂ ಕನ್ನಡಾಂಬೆಯ ಮನದ ತಲ್ಲಣವನ್ನು ಬಿಂಬಿಸುವ ಕವನ
ನಾನು ಕನ್ನಡವ್ವ ಮಾತಾಡಾಕತ್ತೇನಿ..
ಎಂಬುದನ್ನು ಓದಿಯೇ ಅನುಭವಿಸಬೇಕು.
ಆದ್ದರಿಂದ ಸಮಸ್ತ ಕನ್ನಡ ಪ್ರೇಮಿಗಳು ಈ ಸುಂದರ ಕಾರ್ಯಕ್ರಮಕ್ಕೆ ಬಂದು ಶೋಭೆ ತರಬೇಕೆಂದು ವಿನಂತಿಸಿದ್ದಾರೆ.