ವಿಷಯ ಮಂಡನೆಯಲ್ಲಿ ತೇಜಸ್ವಿನಿ ದ್ವಿತೀಯ ಸ್ಥಾನ.
ಹರಿಯಾಣ ರಾಜ್ಯ: ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆ. ಇದು ಈಜಿಪ್ಟ್ ದೇಶದಲ್ಲಿದೆ – ಸೈನಾಯಿ ಜಂಬೂದ್ವೀಪದ ಪಶ್ಚಿಮಕ್ಕಿದ್ದು ೧೬೩ ಕಿಮೀ ಉದ್ದವಿದೆ. ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ ೩೦೦ ಮೀ ಅಗಲವಿದೆ.ಈ ಕಾಲುವೆಯಿಂದ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳು ಆಫ್ರಿಕಾ ಖಂಡದ ಸುತ್ತ ಹೋಗಬೇಕಾಗದೆ ನೇರವಾಗಿ ಹೋಗುವ ಅವಕಾಶವನ್ನು ಪಡೆದಿವೆ. ೧೮೬೯ ರಲ್ಲಿ ಈ ಕಾಲುವೆಯನ್ನು ತೆರವು ಮಾಡಲಾಯಿತು. ಇದಕ್ಕೆ ಮೊದಲು ಹಡಗುಗಳು ಸುಯೆಜ್ ವರೆಗೂ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಂದ ಸಾಮಾನುಗಳನ್ನು ಸಯೀದ್ ಬಂದರಿನ ವರೆಗೆ ಭೂಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಬೇರೊಂದು ಹಡಗಿನಲ್ಲಿ ಯೂರೋಪಿಗೆ ಒಯ್ಯಲಾಗುತ್ತಿತ್ತು.
ಸದ್ಯ ಜಾಗತಿಕ ಮಟ್ಟದಲ್ಲಿ ವಿಜ್ಞಾನ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಅಭಿವೃದ್ಧಿ ಪಡಿಸಲು ಯೋಜನೆಯನ್ನು ವಿಶ್ವಸಂಸ್ಥೆ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ.ರಾಜತಾಂತ್ರಿಕ ವಿಷಯದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ವಿಷಯ ಮಂಡಿಸಲು ತಿಳಿಸಿದಾಗ ನನ್ನ ಸ್ನೇಹಿತ ಮಹಾಂತೇಶ (ಮೂಲತಃ ಮುರಗೋಡ ಸಮೀಪದ ಹಿರೇಕೊಪ್ಪದವರು.ನಂತರ ವ್ಯಾಪಾರ ನಿಮಿತ್ತವಾಗಿ ಮುನವಳ್ಳಿ ಗೆ ಬಂದರು. ಅವರ ತಂದೆ ದಲಾಲಿ ಅಂಗಡಿ ನಡೆಸುತ್ತಿದ್ದರು . ಹಲವು ವರ್ಷಗಳ ನಂತರ ಈ ಕುಟುಂಬ ಹುಬ್ಬಳ್ಳಿಗೆ ಸ್ಥಳಾಂತರ ಆಯಿತು). ಮಹಾಂತೇಶರ ಮಗಳಾದ ತೇಜಸ್ವಿನಿ.ಮಹಾಂತೇಶ ಶಿರಹಟ್ಟಿ ಇವಳು ಸದ್ಯ ಹರಿಯಾಣ ರಾಜ್ಯದ ಜಿಂದಾಲ್ ವಿಶ್ವವಿದ್ಯಾಲಯದ ಲ್ಲಿ ರಾಜತಾಂತ್ರಿಕ ವಿಷಯದಲ್ಲಿ ಶಿಕ್ಷಣ ಪಡೆಯುತ್ತಿದ್ದು. ಇತ್ತೀಚಿಗೆ ಸುಯೇಜ ಕಾಲುವೆ ಸಂಪರ್ಕ ಕಲ್ಪಿಸುವ ದೇಶಗಳಲ್ಲಿ ರಸ್ತೆ ಮೂಲಕ ವ್ಯಾಪಾರ ವಹಿವಾಟು ನಡೆಸಿದರೆ ಆಗುವ ಅನುಕೂಲ ಹಾಗೂ ಅನಾನುಕೂಲ ವಿಷಯ ಕುರಿತು ವಿಷಯ ಮಂಡಿಸಲು ಹೇಳಿದಾಗ ಮಂಡಿಸಿದ ವಿಷಯ ತೇಜಸ್ವಿನಿ ಮಹಾಂತೇಶ ಶಿರಹಟ್ಟಿ ದ್ವಿತೀಯ ಗೌರವಕ್ಕೆ ಪಾತ್ರಳಾಗಿರುವಳು.