ರಾಜ್ಯಮಟ್ಟದ ಮಹಿಳಾ ರತ್ನ ಪ್ರಶಸ್ತಿಗೆ ಸರಕಾರಿ ಪ್ರೌಢಶಾಲೆ ಶಿಕ್ಷಕಿಯರಾದ ಮೀನಾಕ್ಷಿ ಸೂಡಿ ಆಯ್ಕೆ…..
ಬೆಳಗಾವಿ ಜಿಲ್ಲೆಯ ಚನ್ನಮ್ಮನಕಿತ್ತೂರ ತಾಲ್ಲೂಕಿನ ಸರಕಾರಿ ಪ್ರೌಢಶಾಲೆಯ
ತುರಕರಶೀಗಿಹಳ್ಳಿಯ ಇಂಗ್ಲೀಷ್ ಶಿಕ್ಷಕಿಯರಾದ ಶ್ರೀಮತಿ ಮೀನಾಕ್ಷಿ ಸೂಡಿ ಇವರು ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿವತಿಯಿಂದ ಕೊಡಮಾಡುವ ಕರ್ನಾಟಕ ರಾಜ್ಯ ಮಹಿಳಾರತ್ನ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ರಾಜ್ಯ ಮಟ್ಟದ ಮಹಿಳಾ ರತ್ನ ಪ್ರಶಸ್ತಿಯನ್ನುದಿನಾಂಕ 15 10 2024 ರಂದು ಅದ್ದೂರಿ *ಸಮಾರಂಭದಲ್ಲಿ* ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸೋಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ,ಸಾಹಿತ್ಯಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯ ಇವರ ಸೇವೆ ಹಾಗೂ ಉನ್ನತ ಮಟ್ಟದ ಯೋಜನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪಡೆದ ಶಿಕ್ಷಕಿಯರಿಗೆ ಕುಟುಂಬ ದವರಿಂದ, ವಿದ್ಯಾರ್ಥಿಗಳಿಂದ ಹಾಗೂ ಸ್ನೇಹಿತರಿಂದ ಅಪಾರ ಅಭಿನಂದನೆಗಳ ಮಾಹಾಪೂರವೇ ಹರಿದು ಬರುತ್ತಿದೆ.