ದೃಷ್ಟಿ ಬದಲಿಸು,ದೃಶ್ಯ ಬದಲಾದೀತು ಹವ್ಯಾಸ ಬದಲಿಸು ಹಣೆಬರಹ ಬದಲಾಗುವುದು ಮಲ್ಲಿಕಾರ್ಜುನ ತೊದಲಬಾಗಿ,
ಧಾರವಾಡ,: ‘ದೃಷ್ಟಿ ಬದಲಿಸು ದೃಶ್ಯ ಬದಲಾದಿತು, ಹವ್ಯಾಸ ಬದಲಿಸು ಹಣೆಬರಹ ಬದಲಾದೀತು, ದೋಣಿ ಬದಲಿಸ ಬೇಕೆಂದಿಲ್ಲ ದಿಕ್ಕು ಬದಲಿಸಿದರೆ ಸಾಕು,ನೀನು ಸೇರುವ ದಡ ಎದುರಾದೀತು’ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಅಪ್ನಾದೇಶ ಫೌಂಡೇಷನ್ ಆಯೋಜಿಸಿದ್ದ, ಗುರುಶ್ರೀ, ಶ್ರಮಜೀವಿ, ಅತ್ಯುತ್ತಮ ಶಾಲೆ, ಬೆಂಗಳೂರಿನ ನಿವೃತ್ತ ಉಪನ್ಯಾಸಕಿ ವಿದ್ಯಾ ನಾಡಿಗೇರರವರ ಸಾಧನೆಯ ಸಾಕ್ಷ್ಯಚಿತ್ರ ಹಾಗೂ ನಾ ಕಂಡ ಕನಸು ಶೈಕ್ಷಣಿಕ ಕಿರು ಚಲನಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ, ‘ಅಪ್ನಾದೇಶ ಫೌಂಡೇಷನ್ ಇದೊಂದು ಸ್ವಯಂ ಸೇವಾ ಸಂಸ್ಥೆ, ಎಲ್ಲಾ ಕೆಲಸವನ್ನು ಸರಕಾರವೇ ಮಾಡಲಿ ಎಂಬ ಜನರ ಮನೋಧೋರಣೆಯನ್ನು ಹೋಗಲಾಡಿಸಲು, ಜನರಲ್ಲಿ ಜಾಗೃತಿ ಉಂಟು ಮಾಡುವುದು, ಗಿಡಮರಗಳನ್ನು ನೆಟ್ಟು ಪೋಷಿಸುವುದು, ಪ್ಲಾಸ್ಟಿಕ್ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು, ಬಣ್ಣ ಕಾಣದ ಶಾಲೆಗಳಿಗೆ ಬಣ್ಣದರ್ಪಣ ಮಾಡುವುದು, ಶಿಕ್ಷಕರು,ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವುದು, ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆ, ಅನಕ್ಷರತೆ, ಬಾಲ್ಯವಿವಾಹ ಇಂತಹುಗಳನ್ನು ಹೋಗಲಾಡಿಸಲು ಬೀದಿ ನಾಟಕ ರೂಪಕಗಳ ಮೂಲಕ ಅರಿವು ಮೂಡಿಸುವುದು, ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಮಕ್ಕಳಿಗೆ ಉತ್ತೇಜನ ನೀಡುವುದು, ಈ ಫೌಂಡೇಷನ್ ನ ಮುಖ್ಯ ಗುರಿಯಾಗಿದೆ, ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಶ್ರೀಮತಿ ಲೂಸಿ ಸಾಲ್ಡಾನ ಹಾಗೂ ಧಾರವಾಡದ ಶಿಕ್ಷಕ ಸಾಹಿತಿ ಶ್ರೀ ಎಲ್ ಐ ಲಕ್ಕಮ್ಮನವರ ಇವರ ಕೃಪಾಶೀರ್ವಾದದಿಂದ ಕಟ್ಟಿದ ಸಂಸ್ಥೆ ಇದಾಗಿದೆ’ ಎಂದರು,
ನಾ ಕಂಡ ಕನಸು ಶೈಕ್ಷಣಿಕ ಕಿರುಚಲನಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಧಾರವಾಡದ ಆಯುಕ್ತರ ಕಚೇರಿಯ ಉಪನಿರ್ದೇಶಕರಾದ ಎಸ್ ಬಿ ಬಿಂಗೇರಿ ಅತ್ಯುತ್ತಮ ಶಾಲೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಈ ದಿನಗಳಲ್ಲಿ ತುಂಬಾ ಮಹತ್ವದ ಕಾರ್ಯವಾಗಿದೆ, ಏಕೆಂದರೆ ಸರ್ಕಾರಿ ಶಾಲೆಗಳ ಏಳಿಗೆಗಾಗಿ ಶಿಕ್ಷಕರು,ಶಾಲಾಭಿವೃದ್ದಿ ಸಮಿತಿ, ಜನಸಮುದಾಯದ ಸಹಕಾರದಿಂದ ಶಾಲೆಗಳನ್ನು ಅಭಿವೃದ್ಧಿ ಮಾಡಿರುತ್ತಾರೆ, ಅದರಲ್ಲೂ ವಿಶಿಷ್ಠವಾದ ಸಾಧನೆ ಮಾಡಿದ ಶಾಲೆಗಳನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸುವ ಅಪ್ನಾದೇಶ ಫೌಂಡೇಷನ್ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಅಕ್ಷರತಾಯಿ ಲೂಸಿ ಸಾಲ್ಡಾನರವರ ವೈ ಬಿ ಕಡಕೋಳ ಸಂಪಾದಕತ್ವದ ಸಂಸ್ಕೃತ ಸೂಕ್ತಿಗಳು ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಹಾವೇರಿಯ ಡಯಟ್ ಪ್ರಾಚಾರ್ಯರಾದ ಗಿರೀಶ ಪದಕಿ ಮಾತನಾಡಿ, “ಮೊಬೈಲ್ ಹಾವಳಿಯಿಂದಾಗಿ ಪುಸ್ತಕ ಓದುವ ಆಸಕ್ತಿ ಜನರಲ್ಲಿ ಕಡಿಮೆ ಆಗಿದೆ,ಶಿಕ್ಷಕರು ಮಕ್ಕಳು ಪುಸ್ತಕವನ್ನು ಓದುವುದನ್ನು ನಿಲ್ಲಿಸಬಾರದು, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುವುದು, ಮೊಬೈಲ್ ಬಳಕೆಯನ್ನು ತಪ್ಪಿಸಲು ಪುಸ್ತಕ ಓದುವ ರೂಢಿಯನ್ನು ಬೆಳೆಸಿಕೊಳ್ಳಿ” ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಗುರು ತಿಗಡಿ ವಿದ್ಯಾ ನಾಡಿಗೇರ, ಪ್ರಭು ಗಂಜಿಹಾಳ, ರವಿಚಂದ್ರನ್ ದೊಡ್ಡಿಹಾಳ, ಮಾತನಾಡಿದರು, ಅಪ್ನಾದೇಶ ಫೌಂಡೇಷನ್ ಅಧ್ಯಕ್ಷ ವಾಯ್ ಬಿ ಕಡಕೋಳ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮಾರಂಭದಲ್ಲಿ ಮಲ್ಲಪ್ಪ ಹೊಸಕೇರಿ ಸಿನಿಮಾ ನಿರ್ದೇಶಕ ಸುರೇಶ ಮಹಾದೇವ ಮಂಜುನಾಥ ಹಾರಿಕೊಪ್ಪ, ಗಣ್ಯರಾದ ಎಲ್ ಐ ಲಕ್ಕಮ್ಮನವರ ಚನಬಸಪ್ಪ ಲಗಮಣ್ಣವರ ರುದ್ರೇಶ ಕುರ್ಲಿ. ಲೂಸಿ ಸಾಲ್ಡಾನ ಶ್ರೀನಿವಾಸ ವಾಲೀಕಾರ ಪ್ರೇಮಾ ಪೂಜಾರ ಪ್ರೀತಿ ದೊಡಮನಿ, ಸಂಗಮೇಶ ಖನ್ನಿನಾಯ್ಕರ, ಶಿವಮೊಗ್ಗದ ಶಮಶೀರಖಾನ ಎಸ್ ಎಫ್ ಪಾಟೀಲ ಮುಂತಾದವರು ಇದ್ದರು,ರುದ್ರೇಶ ಕುರ್ಲಿ ನಿರೂಪಿಸಿದರು. ಎಲ್ ಐ ಲಕ್ಕಮ್ಮನವರ ಸ್ವಾಗತಿಸಿದರು. ರವಿಚಂದ್ರ ದೊಡ್ಡಿಹಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ ಬಿ ಕಡಕೋಳ ಅಪ್ನಾದೇಶ ಪೌಂಡೇಶನ್ ಕುರಿತು ಮಾತನಾಡಿದರು. ರತ್ನ ಸೇತಸನದಿ ವಂದಿಸಿದರು.