ಅಪ್ನಾದೇಶ ಬೆಳೆದು ಬಂದ ಹಿನ್ನಲೆ
೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ.ಶಿಕ್ಷಕರು.ಸಮಾಜ ಚಿಂತಕರು.ನ್ಯಾಯವಾದಿಗಳು.ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹೃದಯರು ಇದರ ಪದಾಧಿಕಾರಿಗಳಾದರು.’ನನ್ನ ದೇಶಕ್ಕೆ ನನ್ನಿಂದ ಏನನ್ನು ಮಾಡಲು ಸಾಧ್ಯ ಎಂಬುದನ್ನು ಚಿಂತನೆ ಮೂಲಕ ಸಮಾಜೋಪಯೋಗಿ ಚಟುವಟಿಕೆಗಳನ್ನು ತನ್ನಷ್ಟಕ್ಕೆ ತಾನೇ ಮಾಡುತ್ತ ಸಾಗುವುದು ಇವರ ಗುರಿಯಾಗಿತ್ತು’.
೨೦೧೧ ರಿಂದ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಅಜ್ಞಾನ, ಮೂಢನಂಬಿಕೆ ಇವುಗಳನ್ನು ಹೋಗಲಾಡಿಸಲು ಗ್ರಾಮೀಣ ಪ್ರದೇಶದಲ್ಲಿ ಜನ ಜಾಗ್ರತಿ ಕಲಾಜಾಥಾ ಮೂಲಕ ಮತ್ತು ಸಭೆ ಸಮಾರಂಭಗಳನ್ನು ಏರ್ಪಡಿಸಿ ಜನಜಾಗ್ರತಿ ಮಾಡುತ್ತಾ ಜನರಲ್ಲಿ ವಿಜ್ಞಾನದ ಬಗ್ಗೆ ತಿಳುವಳಿಕೆಯನ್ನು ಮೂಡಿಸುವುದು ಮತ್ತು ಪರಿಸರ ಪ್ರಜ್ಞೆಯನ್ನು ಮೂಡಿಸುವುದು ಹಾಗೂ ಸ್ವಚ್ಛತೆಯ ಅರಿವನ್ನು ಮೂಡಿಸುವುದು, ಗಿಡ ಮರಗಳನ್ನು ನೆಡಲು ಪ್ರೋತ್ಸಾಹಿಸುವುದು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ದಾಖಲಾತಿ ಹೆಚ್ಚಿಸುವುದು. ನೀರನ್ನು ಮಿತವ್ಯಯವಾಗಿ ಬಳಸುವಂತೆ ಜನರಲ್ಲಿ ತಿಳುವಳಿಕೆ ಹೇಳುವುದು, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ನೀಡುವುದು ಹಾಗೇ ನಮ್ಮ ಮನೆಯ ಮುಂದೆ ಕಸ, ಕಡ್ಡಿ, ಕಲ್ಲು ಬಿದ್ದಿದ್ದರೆ ಅದನ್ನು ತೆಗೆಯುವುದು ಸರಕಾರದ ಕೆಲಸ ಅಂತಾ ಬಹುತೇಕ ಜನರ ಭಾವನೆ ಇರುತ್ತದೆ.
ಆದರೆ ಜನಸಾಮಾನ್ಯರಿಗೆ ಈ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ಸಾವಯವ ಕೃಷಿಯ ಬಗ್ಗೆ ಅರಿವನ್ನು ಮೂಡಿಸುವುದು ಹೀಗೆ ವಿಭಿನ್ನ ಚಟುವಟಿಕೆಗಳನ್ನು ಮಾಡುತ್ತ ಈ ಸಂಘಟನೆ ಬೆಳೆಸತೊಡಗಿದರು.ಅಂದು ಹುಟ್ಟು ಹಾಕಿದ ಸಂಘಟನೆ ಪ್ರತಿ ವರ್ಷವೂ ಶಿಕ್ಷಕರಿಗೆ ಶಿಕ್ಷಕ ರತ್ನ. ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವ ಮಹನೀಯರಿಗೆ ಶ್ರಮಜೀವಿ.ಶ್ರಮಿಕ ರತ್ನ ಪ್ರಶಸ್ತಿ ನೀಡುತ್ತ ಬರತೊಡಗಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಪ್ನಾದೇಶದ ಬಹುತೇಕ ಚಟುವಟಕೆಗಳನ್ನು ಇದರ ರೂವಾರಿ ಶಿಕ್ಷಕ ಎಲ್.ಐ.ಲಕ್ಕಮ್ಮನವರ ರೂಪಿಸುತ್ತ ಬರತಲಾಲ್ ಮೀನಾ ಅವರ ಜೊತೆಗೆ ಕೈ ಜೋಡಿಸುತ್ತ ಬರತೊಡಗಿ ನಂತರ ಭರತ್ ಲಾಲ್ ಮೀನಾ ವರ್ಗಾವಣೆಗೊಂಡರೂ ಕೂಡ ಈ ಸಂಘಟನೆಯನ್ನು ಹಲವಾರು ಸಹೃದಯ ಮನಸುಗಳ ಜೊತೆ ಸೇರಿ ಕಾರ್ಯ ಮಾಡತೊಡಗಿದರು.ರಾಜ್ಯ ಮೂಲೆ ಮೂಲೆಗಳಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಅಪ್ನಾದೇಶ ಮೂಲಕ ಪರಿಚಯವಾಗಿ ಬಾಗಲಕೋಟೆ.ಬೆಳಗಾವಿ ಮೈಸೂರು ಜಿಲ್ಲೆಗಳಲ್ಲಿ ಅಪ್ನಾದೇಶ ಶಾಖೆಗಳು ರಚನೆಯಾಗಿ ಕಾರ್ಯಾರಂಭ ಮಾಡತೊಡಗಿದವು.
ಮೊದಮೊದಲು ಶಂಕರ ಹಲಗತ್ತಿಯವರ ಮಕ್ಕಳ ಮಾಸಪತ್ರಿಕೆ ಗುಬ್ಬಚ್ಚಿಗೂಡು ಈ ಅಪ್ನಾದೇಶ ಕಾರ್ಯಕ್ರಮಗಳಿಗೆ ಸಹಕಾರ ಒದಗಿಸುತ್ತ ಬರತೊಡಗಿದ್ದನ್ನು ಸ್ಮರಿಸಲೇಬೇಕು.ಶಂಕರ ಹಲಗತ್ತಿಯವರ ಪ್ರೋತ್ಸಾಹ ಇಂದು ಅಪ್ನಾದೇಶ ಹೆಮ್ಮರವಾಗಿ ಬೆಳೆಯಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ.ಧಾರವಾಡಕ್ಕೆ ಆಗಮಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು.ಉಪನಿರ್ದೇಶಕರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರವನ್ನಂತೂ ಮರೆಯಲಾಗದು,ಇವರೊಂದಿಗೆ ಹಿರಿಯರಾದ ಗುರು ತಿಗಡಿ.ಚಂದ್ರಶೇಖರ ತಿಗಡಿ.ವಕೀಲರಾದ ಜಿ.ಟಿ.ಶಿರೋಳ.ಸಿ.,ಆರ್.ಪಿ ರುದ್ರೇಶ ಕುರ್ಲಿ,ನಿವೃತ್ತ ಶಿಕ್ಷಕಿ ದತ್ತಿದಾನಿ ಲೂಸಿ ಸಾಲ್ಡಾನ್ ಮೊದಲಾದ ಮಹನೀಯರ ಸಹಾಯ ಸಹಕಾರ ಪ್ರೋತ್ಸಾಹ ನಿರಂತರವಾಗಿ ಸಾಗಿ ಬರುತ್ತಿದೆ.
ಈ ಸಂಘಟನೆಗಳ ಚಟುವಟಿಕೆಗಳಿಗೆ ಯಾವುದೇ ರೀತಿಯ ಹಣಕಾಸಿನ ನೆರವು ಸರಕಾರದಿಂದ ಇಲ್ಲ.ಇಲ್ಲಿನ ಸದಸ್ಯರು ತಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟöನ್ನು ನೀಡುವ ಜೊತೆಗೆ ಸಮಾಜದ ಸಹೃದಯರು ಇಂತಹ ಚಟುವಟಿಕೆಗಳಿಗೆ ಯಾರು ನೆರವು ನೀಡುವರೋ ಅಂತವರಿಂದ ನೆನಪಿನ ಕಾಣಿಕೆ,ಉಟೋಪಚಾರ.ಕಾರ್ಯಕ್ರಮಕ್ಕೆ ಬೇಕಾಗುವ ಮುದ್ರಣ ಸಾಮಗ್ರಿಯಿಂದ ಹಿಡಿದು ವಿವಿಧ ರೂಪದಲ್ಲಿ ಸಹಕಾರ ಪಡೆಯುವ ಮೂಲಕ ಅವರೂ ಕೂಡ ಸಮಾಜೋಪಯೋಗಿ ಚಟುವಟಿಕೆಗಳಿಗೆ ನೀಡುವ ಸಹಕಾರ ಸ್ಮರಿಸುವ ಜೊತೆಯಲ್ಲಿ ವಿಭಿನ್ನ ರೀತಿಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತ ಬರುತ್ತಿರುವುದಕ್ಕೆ ಸಾಕ್ಷಿ.
ಪ್ರತಿ ವರ್ಷ ಶಿಕ್ಷಕರನ್ನು ಯಾವುದೇ ಪ್ರಸ್ತಾವಣೆ ಪಡೆಯದೇ ಅವರಲ್ಲಿನ ಪ್ರತಿಭೆ ಗುರುತಿಸಿ ರಾಜ್ಯ ಮಟ್ಟದ “ಶಿಕ್ಷಕ ರತ್ನ” ಮತ್ತು “ಗುರುಶ್ರೀ” ಪ್ರಶಸ್ತಿಯನ್ನು ೨೦೧೧ ರಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ಆರಂಭಿಸಿದರು.ಪ್ರತಿ ವರ್ಷವೂ ಆ ಶಿಕ್ಷಕರಿಗೆ ತಮಗೆ ಪ್ರಶಸ್ತಿ ಬಂದಿದೆ ಎಂದು ತಿಳಿಸುವವರೆಗೂ ಅವರಿಗೆ ವಿಷಯ ಗೊತ್ತಾಗದಂತೆ ಗೌಪ್ಯತೆಯನ್ನು ಕಾಯ್ದುಕೊಂಡು ಬರುತ್ತಿರುವುದು ಈ ಪ್ರಶಸ್ತಿಗೆ ಹೆಚ್ಚಿದ ಮೌಲ್ಯ.ಎಲೆಮರೆಯ ಕಾಯಿಯಂತೆ ಬೋಧನೆಯಲ್ಲಿ ಗುರುತರವಾಗಿ ತೊಡಗಿಕೊಂಡಿರುವ ಶಿಕ್ಷಕರು ಈ ಪ್ರಶಸ್ತಿಗೆ ಭಾಜನರಾಗುತ್ತ ಬಂದಿರುವರು.
ನಂತರ ಉತ್ತಮ ಶಾಲೆ ಪ್ರಶಸ್ತಿ ಕೊಡಲು ಆರಂಭಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಅಭಿವೃದ್ದಿ ಸದಸ್ಯರು ಅನೇಕ ಜನ ತಮ್ಮ ಊರ ಶಾಲೆಗೆ ತಮ್ಮದೇ ಕೊಡುಗೆ ನೀಡುತ್ತ ತಮ್ಮ ಶಾಲೆಯನ್ನು ವಿಶಿಷ್ಟರೀತಿಯಲ್ಲಿ ಗುರುತಿಸುವ ಕಾರ್ಯ ಮಾಡತೊಡಗಿದರು.ಅವರಿಗೆ ಅಲ್ಲಿನ ಶಿಕ್ಷಕರು ಕೂಡ ಪ್ರೋತ್ಸಾಹ ನೀಡತೊಡಗಿದರು.ಅಂತಹ ಶಾಲೆಗಳನ್ನು ಧಾರವಾಡಕ್ಕೆ ಬರುವಂತೆ ಮಾಡಿ ಅವರ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ಕೂಡ ನೀಡತೊಡಗಿ ಎಸ್.ಡಿ.ಎಂ.ಸಿಯವರು ಬಹಳ ಸಂತಸಗೊಂಡು ಇನ್ನಷ್ಟು ಉತ್ತಮ ಕಾರ್ಯವನ್ನು ತಮ್ಮ ಶಾಲೆಗೆ ಮಾಡಲು ಉತ್ತೇಜನ ದೊರೆಯುವಂತಾಯಿತು.
ಶ್ರಮಜೀವಿ ಪ್ರಶಸ್ತಿ ನಾಡಿನ ಮೂಲೆ ಮೂಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯ ಮಾಡುತ್ತಿರುವ ಜನರನ್ನು ಶ್ರಮಿಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲು ಜೊತೆಗೆ ಅವರನ್ನು ಗೌರವಿಸುವ ಪ್ರಯತ್ನ ಸಾಗಿತು.ಸಂಗೀತ.ಸಾಹಿತ್ಯ.ಕಲೆ ಜೊತೆಗೆ ರೊಟ್ಟಿ ಮಾಡುವ ಮೂಲಕ ಬದುಕ ಕಟ್ಟಿಕೊಂಡ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಹೆರಿಗೆ ಮಾಡಿಸುವ ಸೂಲಗಿತ್ತಿಯವರು.ನರ್ಸಗಳು.ಮನೆಗೆಲಸ ಮಾಡಿಕೊಂಡು ಉದ್ಯಮ ಸಾಗಿಸುವವರು.ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಅಧ್ಯಕ್ಷರವರೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡವರು.ಸರಕಾರಿ ನೌಕರರನ್ನು ಹೊರತುಪಡಿಸಿ ಸ್ವಯಂ ಉದ್ಯೋಗ ಮಾಡುವವರಿಂದ ಹಿಡಿದು ಸಮಾಜ ಸೇವೆಗೈಯುವವರನ್ನು ಗುರುತಿಸುವ ಕಾರ್ಯ ಕೂಡ ಜರುಗತೊಡಗಿ ಅಂಥವರನ್ನು ಶ್ರಮಿಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡುವಂತಾಗಿದ್ದು ಅಪ್ನಾದೇಶ ಬಳಗದ ಕಾರ್ಯಗಳಲ್ಲೊಂದು ಹೀಗೆ ಸಮಾಜದ ವಿವಿಧ ಸ್ಥರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಎಲೆಮರೆಯ ಕಾಯಿಯ ತೆರದಲ್ಲಿ ಬದುಕುತ್ತಿರುವವರ ಗುರುತಿಸುವ ಕಾರ್ಯದ ಮೂಲಕ ಅಪ್ನಾದೇಶ ಬೆಳೆದು ಬಂದಿದೆ.
ಶ್ರೀ ಭರತ್ ಲಾಲ್ ಮೀನಾ
ರಾಜಸ್ಥಾನ ಸವಾಯಿ ಮಾದೋಪುರದಲ್ಲಿರುವ ಪುಟ್ಟ ಹಳ್ಳಿಯಿಂದ ಬಂದಭರತ್ ಲಾಲ್ ಮೀಣಾ ತನ್ನ ಸ್ವಂತ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರಾಜಸ್ಥಾನ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ನಂತರ ಇಂಗ್ಲೆಂಡ ದೇಶದ ಈಸ್ಟ ಆಂಗ್ಲಿಯಾ ವಿಶ್ವವಿದ್ಯಾಲಯದಿಂದಗ್ರಾಮೀಣಾಭಿವೃದ್ದಿಯಲ್ಲಿ ಮತ್ತೊಂದು ಸ್ನಾತಕೋತ್ರರ ಪದವಿಯನ್ನು ಪಡೆದರು.೧೯೮೦ ರಲ್ಲಿ ರಿಜರ್ವ ಬ್ಯಾಂಕ್ ಆಪ್ ಇಂಡಿಯದಲ್ಲಿ ಗುಮಾಸ್ತರಾಗಿ ಸೇವೆ ಸೇರಿದರು.ನಂತರ ನಾಲ್ಕು ವರ್ಷಗಳಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಅವರು ಕರ್ನಾಟಕ ರಾಜ್ಯವನ್ನು ತಮ್ಮ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡರು.ಕರ್ನಾಟಕಕ್ಕೆ ಬಂದ ನಂತರ ಅವರು ಮೊದಲು ಕಲಿತದ್ದು ಕನ್ನಡ ಭಾಷೆಯನ್ನುಇವರು ಮಂಗಳೂರು ಜಿಲ್ಲಾಧಿಕಾರಿಯಾಗಿ ೧೪ ವರ್ಷ ಸೇವೆ ಮಾಡಿರುವರು.೧೯೯೯ ರಲ್ಲಿ ಅಪ್ನಾದೇಶ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು.ಇದು ಜನ ತಮ್ಮ ತಮ್ಮ ಹಳ್ಳಿಗಳಲ್ಲಿ ನಾಯಕತ್ವ ತಗೆದುಕೊಂಡು ಸ್ಥಳೀಯ ಪ್ರದೇಶಗಳ ಸ್ವಚ್ಚತೆ.ರಕ್ತದಾನ.ಗ್ರಾಮೀಣ ಬದುಕಿನಲ್ಲಿ ಉತ್ತಮ ವಿಚಾರಗಳನ್ನು ಬಿಂಬಿಸಲು ಯಾವ ಕಾರ್ಯ ಮಾಡಿದರೆ ಸೂಕ್ತ ಎಂಬ ವಿಚಾರಗಳನ್ನು ಜನರಲ್ಲಿ ಬಿತ್ತುವ ಜೊತೆಗೆ ಸಾವಯವ ಕೃಷಿ.ಅರಣ್ಯ ಬೆಳೆಸುವುದು.ಸಮಾಜಕ್ಕೆ ಉಪಯೋಗ ಕಾರ್ಯಗಳನ್ನು ಮಾಡುವುದು ಹೀಗೆ ರಚನಾತ್ಮಕ ಕಾರ್ಯಗಳನ್ನು ಮಾಡತೊಡಗಿದರು.ಕನ್ನಡ ಇಂಗ್ಲೀಷ. ಹಿಂದಿ ಮೂರು ಭಾಷೆಗಳಲ್ಲಿ ಪ್ರಕಟವಾಗುವ ಅಪ್ನಾದೇಶ ಸಮಾಚಾರ ಎಂಬ ಪತ್ರಿಕೆಯನ್ನು ಕೂಡ ಇದರೊಟ್ಟಿಗೆ ಆರಂಭಿಸಿದರು.ಈ ಪತ್ರಿಕೆಯಲ್ಲಿ ಅಪ್ನಾದೇಶ ಕಾರ್ಯಕ್ರಮಗಳು ಉತ್ತಮ ಚಿಂತನೆಯುಳ್ಳ ಬರಹಗಳು ಪ್ರಕಟವಾಗತೊಡಗಿದವು.ಚಂದಾದಾರರನ್ನು ಹೆಚ್ಚಿಸಿಕೊಳ್ಳುವ ಮೂಲಕ ಈ ಪತ್ರಿಕೆ ಬರತೊಡಗಿತುಬೆಳಗಾವಿ ಉತ್ತರ ಕನ್ನಡ ಕಾರವಾರ ಶಿವಮೊಗ್ಗ ಧಾರವಾಡ ಜಿಲ್ಲೆಗಳಲ್ಲಿ ಇವರ ಸೇವೆ ಸಾಗಿತು,ಈ ಎಲ್ಲ ಜಿಲ್ಲೆಗಳಲ್ಲಿ ಅಪ್ನಾದೇಶ ಸಂಘಟನೆ ಮೂಲಕ ಸರಕಾರದ ಮೇಲೆ ಅವಲಂಬಿತರಾಗದ ಜನ ಸ್ವಂತ ದುಡಿಮೆಯಿಂದ ಸಮಾಜಕ್ಕೆ ಏನನ್ನು ಮಾಡಲು ಸಾಧ್ಯ ಎಂಬುದನ್ನು ಜನರ ಸಹಕಾರದಿಂದ ಮಾಡಿದ್ದು ಸ್ಮರಣೀಯ.ಕರ್ನಾಟಕ ಸರಕಾರದ ಇನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನಿಭಾಯಿಸಿ ನಿವೃತ್ತರಾದ ಭರತ್ ಲಾಲ್ ಮೀನಾ ಅಪ್ನಾದೇಶ ಮೂಲಕ ಸಮಾಜೋಪಯೋಗಿ ಕಾರ್ಯಕ್ಕೆ ಮುನ್ನುಡಿ ಬರೆದ ಮಹನೀಯರು.
ಅಪ್ನಾದೇಶ ಚಟುವಟಕೆಗಳು
ಭರತ್ ಲಾಲ್ ಮೀನಾ ಹಾಕಿಕೊಟ್ಟ ಮಾರ್ಗದಲ್ಲಿ ಶ್ರಮ ದಾನ ರಕ್ತದಾನ ಪರಿಸರ ಜಾಗೃತಿ.ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ.ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಯಾವುದೇ ಪ್ರಸ್ತಾವನೆ ಪಡೆಯದೇ ಅಪ್ನಾದೇಶ ಬಳಗದ ಸದಸ್ಯರೇ ಆಯ್ಕೆ ಮಾಡಿ ಕರೆದು ಗೌರವ ನೀಡುವ ಪ್ರಶಸ್ತಿಗಳು ಜನಜಾಗೃತಿ.ಬೀದಿನಾಟಕ.ಹೀಗೆ ಹತ್ತು ಹಲವು ಕಾರ್ಯಗಳನ್ನು ಅಪ್ನಾದೇಶ ನಡೆಸಿಕೊಂಡು ಬರುತ್ತಿದೆ.ಈ ಚಟುವಟಕೆಗಳಿಗೀಗ 13 ನೆಯ ವರ್ಷದ ಹುಟ್ಟು ಹಬ್ಬ. ಈ ವರ್ಷ ಸವದತ್ತಿ ತಾಲೂಕಿಗೆ ಅಧ್ಯಕ್ಷ ಸ್ಥಾನ ಎಲ್.ಐ.ಲಕ್ಕಮ್ಮನವರ ನೀಡಿದ್ದು ಉಪಾಧ್ಯಕ್ಷ ಕೂಡ ಸವದತ್ತಿಯ ಮಾಧ್ಯಮ ಪ್ರತಿನಿಧಿ ಪುಂಡಲೀಕ ಬಾಳೋಜಿಯವರ ಹೆಗಲಿಗೆ ಹಾಕಿರುವರು ಪುಂಡಲೀಕ ಬಾಳೋಜಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂ<ಘದ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಎರಡನೆಯ ಅವಧಿಯಲ್ಲಿ ಆಯ್ಕೆಯಾಗಿರುವರು.ಉಪ್ಪಿನ ಬೆಟಗೇರಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಗಾರ ಚನಬಸು ಲಗಮಣ್ಣವರ ಖಜಾಂಜಿಯಾಗಿರುವರು.ತಾವರೆಕೆರೆಯ ಪ್ರತಿಭಾನ್ವಿತ ಶಿಕ್ಷಕಿ ಡಾ.ವೀಣಾ ಅವರು ಪ್ರಧಾನ ಕಾರ್ಯದರ್ಶಿಯಾಗಿರುವರು.ಸವದತ್ತಿ ತಾಲೂಕಿನ ಯಕ್ಕುಂಡಿ ಹೊಂಗಲ ಮನೆತನದ ಪ್ರತಿಭೆ ದೈಹಿಕ ಶಿಕ್ಷಣದಲ್ಲಿ ಬಿ.ಪಿ.ಈಡಿ ಶಿಕ್ಷಣ ಪೂರೈಸಿ ಮುನವಳ್ಳಿ ಉರ್ದು ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆಗೈಯುತ್ತಿರುವ ಪ್ರಸ್ತುತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಹುದ್ದೆಯಲ್ಲಿರುವ ಎಂ.ಎಸ್.ಹೊಂಗಲ ಸವದತ್ತಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಲ್ಲಿ ಸೇವೆ ಸಲ್ಲಿಸುತ್ತಿರುವ ರತ್ನಾ ಸೇತಸನದಿ.ಧಾರವಾಡದ ಅಜಿತಸಿಂಗ ರಜಪೂತ್.ಗೌರವಾಧ್ಯಕ್ಷರಾದ ವಿದ್ಯಾಧರ ಸುಂಕದ ಸಮಾಜ ಸೇವಕರಾಗಿರುವರು.ಸುವರ್ಣಾ ನಾಯ್ಕ ಆರೋಗ್ಯ ಇಲಾಖೆ ಭಾಗ್ಯಶ್ರೀ ರಜಪೂತ ಸಮಾಜ ಸೇವಕರು.ಪತ್ರಿಕೋದ್ಯಮ ಪದವೀಧರೆ, ,ಶ್ರೀಮತಿ ರಾಜೇಶ್ವರಿ ಕರ್ಜಗಿ ಉಚಿತ ಅನ್ನದಾಸೋಹ ಸೇವೆ ಮಾಡುವ ಸಮಾಜ ಸೇವಕಿ.ಇಂತಹ ಮಹನೀಯರಿಂದ ಈ ಪೌಂಡೇಶನ್ ರಚಿತವಾಗಿದೆ.
ವೈ.ಬಿ.ಕಡಕೋಳ
ಬಿ.ಐ.ಇ.ಆರ್.ಟಿ.
ಕ್ಷೇತ್ರ ಸಂಪನ್ಮೂಲ ಕೇಂದ್ರ
ಸವದತ್ತಿ
೮೯೭೧೧೧೭೪೪೨,೯೪೪೯೫೧೮೪೦೦