” ನಾ ಕಂಡ ಕನಸು ” ಶೈಕ್ಷಣಿಕ ಕಿರು ಚಿತ್ರಕ್ಕೆ ಡಾ ಲತಾ.ಎಸ್. ಮುಳ್ಳೂರ ಅವರಿಂದ ಕ್ಯಾಮರಾ ಚಾಲನೆ ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆ ಕಿರುಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಕೆ,
ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಶ್ರೀಮತಿ ಲೂಸಿ ಸಾಲ್ಡಾನ ಹಾಗೂ ಶಿಕ್ಷಕ ಸಹೋದರ ಎಲ್ ಐ ಲಕ್ಕಮ್ಮನವರ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳರವರ ಸಹಕಾರದಿಂದ, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ, ಶಾಲೆಗೆ ದಾಖಲು ಮಾಡಿ,ಅಕ್ಷರದ ಬೆಳಕು ಮೂಡಿಸುವ, ಶೈಕ್ಷಣಿಕ ಕಳಕಳಿಯ ಕಿರುಚಲನಚಿತ್ರವನ್ನು, ಧಾರವಾಡ ತಾಲ್ಲೂಕಿನ ಮಾವಿನಕೊಪ್ಪ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂದೆ, ಚಿತ್ರೀಕರಣಕ್ಕೆ, ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ, ಲತಾ ಮುಳ್ಳೂರ ಚಾಲನೆ ನೀಡಿ, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕರೆ ನೀಡಿದರು, ಅವರು ಧಾರವಾಡ ತಾಲ್ಲೂಕಿನ ಮಾವಿನಕೊಪ್ಪ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂದೆ ಶೈಕ್ಷಣಿಕ ಕಳಕಳಿಯ ನಾ ಕಂಡ ಕನಸು ಹೊಸ ಕಿರು ಶೈಕ್ಷಣಿಕ ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ, ಮಾತನಾಡಿದರು, ಶ್ರೀಮತಿ ಲೂಸಿ ಸಾಲ್ಡಾನ ಶ್ರೀಮತಿ ವೀಣಾ ಟಿ, ಪತ್ರಕರ್ತರಾದ ಶ್ರೀ ಚನಬಸಪ್ಪ ಲಗಮಣ್ಣವರ ಶ್ರೀ ರವಿಚಂದ್ರನ್ ದೊಡ್ಡಿಹಾಳ, ಶ್ರೀ ಎಸ್ ಬಿ ವಾಲೀಕಾರ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಂಜುನಾಥ ನಕಾಡಿ, ಮುಖ್ಯ ಶಿಕ್ಷಕ ಶ್ರೀ ಪೂಜಾರ, ಚಿತ್ರದ ನಿರ್ದೇಶಕರಾದ ಶ್ರೀ ಸುರೇಶ ಮಹಾದೇವ ಶ್ರೀ ಮಂಜುನಾಥ ಹಾರಿಕೊಪ್ಪ ಮಲ್ಲಪ್ಪ ಹೊಸಕೇರಿ ಲತಾ ಓಲೇಕಾರ, ಗಂಗಪ್ಪ ತಳವಾರ, ಮುಂತಾದವರು ಇದ್ದರು. ಕ್ಯಾಮರಾ ಚಾಲನೆ ಮಾಡಿ ಮಾತನಾಡಿದ ಡಾ, ಲತಾ ಮುಳ್ಳೂರ ಇದೊಂದು ಶೈಕ್ಷಣಿಕ ಕಳಕಳಿಯ ಕಿರುಚಲನಚಿತ್ರವಾಗಿದೆ, ಹಳ್ಳಿಗಾಡಿನಲ್ಲಿ ಕೂಲಿ,ನಾಲಿ ಮಾಡುವ ಬಹಳಷ್ಟು ಮಕ್ಕಳು ಗೊತ್ತಾಗದ ಹಾಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಅಂತಹ ಮಕ್ಕಳಿಗೆ ಗುರುತಿಸಿ, ಶಿಕ್ಷಣ ಕೊಡಿಸುವ ಗುರುತರ ಜವಾಬ್ದಾರಿಯನ್ನು ನಮ್ಮ ಶಿಕ್ಷಕರು ಬಹಳಷ್ಟು ಕಡೆಗಳಲ್ಲಿ ಮಾಡುತ್ತಾ, ಬಂದಿದ್ದಾರೆ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಇರುವ ತಾವರೆಕೆರೆ ಗ್ರಾಮದಲ್ಲಿ ಉತ್ತರ ಕರ್ನಾಟಕದ ನೂರಾರು ಕುಟುಂಬಗಳು ಕೂಲಿ ಮಾಡಲು ವಲಸೆ ಬಂದಿವೆ, ಅಂತಹ ಕೂಲಿ ಕಾರ್ಮಿಕರ ನೂರಾರು ಮಕ್ಕಳಿಗೆ ಗುರುತಿಸಿ, ಬಸ್ಸೆ ಇಲ್ಲದ ಊರಿಗೆ, ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಅಟೋದಲ್ಲಿ ಕರೆದುಕೊಂಡು ಹೋಗಿ, ನಂತರ ಸ್ವಂತ ಒಂದು ಮಿನಿ ಇಕೋ ವಾಹನ ಖರೀದಿಸಿ, ಮಕ್ಕಳಿಗೆ ಕರೆದುಕೊಂಡು ಹೋಗಿ ಅಕ್ಷರ ನೀಡಿದ ವೀಣಾ ಟೀಚರ್ ಇಂದು ಆ ಊರಿಗೆ ಸ್ವಂತ ತಾನೇ ಪ್ರಯತ್ನಪಟ್ಟು ಬಿಎಂಟಿಸಿ ಸಹಕಾರ ಪಡೆದು ಬಸ್ಸಿನ ವ್ಯವಸ್ಥೆ ಮಾಡಿಕೊಂಡು ಇಂದು ಆ ಶಾಲೆಯಲ್ಲಿ ಕೇವಲ ಐದಾರು ಇದ್ದ ಮಕ್ಕಳ ಸಂಖ್ಯೆಯನ್ನು ಮೂವತ್ತು ನಲವತ್ತು ಮಾಡಿ, ದಾನಿಗಳಿಂದ ನನ್ನ ಶಾಲೆ ನನ್ನ ಜವಾಬ್ದಾರಿ ಎನ್ನುವ ನೂತನ ಪರಿಕಲ್ಪನೆಯೊಂದಿಗೆ ಸಾಧನೆ ಮಾಡಿದ ಶಿಕ್ಷಕರ ಬಹುಮುಖ ಕಾರ್ಯವನ್ನು ಇಂತಹ ಸಿನೆಮಾದಿಂದ ಸಮಾಜಕ್ಕೆ ತೋರಿಸುವ ಈ ಚಿತ್ರ ತಂಡದ ಕಾರ್ಯ ಶ್ಲಾಘನೀಯ ಎಂದರು.