ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಆಚರಣೆ
ಸವದತ್ತಿ: “ಮಹಾತ್ಮ ಗಾಂಧಿಯವರು ಒತ್ತಿಹೇಳಿದಂತೆ ಸ್ವಚ್ಛತೆ ಕೇವಲ ದೈಹಿಕ ಕ್ರಿಯೆಯಲ್ಲ, ಆದರೆ ನಮ್ಮ ಆಂತರಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಶಾಸ್ತ್ರಿ ಅವರು ತಮ ಜೀವನದುದ್ದಕ್ಕೂ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಅತ್ಯುನ್ನತ ಆದರ್ಶಗಳನ್ನು ಪ್ರಸ್ತುತಪಡಿಸಿದ್ದಾರೆ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ತಿಳಿಸಿದರು. ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವೀರಯ್ಯ ಹಿರೇಮಠ. ರತ್ನಾ ಸೇತಸನದಿ.ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ. ಎಸ್. ಬಿ. ಬೆಟ್ಟದ. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿ ನಲವಡೆ.ಕುಶಾಲ್ ಮುದ್ದಾಪುರ. ಎಚ್ ಎಲ್ ನದಾಪ್.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಸ್, ಬಿ, ಹಂಪಿಹೊಳಿ. ಎನ್ ಎಸ್ ವಗೆನ್ನವರ. ಎಪ್ ಎಚ್ ಮಾವುತ. ಬಾಬಾಜಾನ್ ಮಾಳಗಿ. ರಾಜು ಹನಸಿ. ಆಯೇಶಾ.ಜಹಗೀರದಾರ.ವಿದ್ಯಾ ಗಾಣಗಿ.ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಕುರಿತು ಗೀತೆಯನ್ನು ಹಾಡಿದರು. ಎಸ್ ಬಿ ಬೆಟ್ಟದ ಸ್ವಾಗತಿಸಿದರು. ಅರ್ಜುನ ಕಾಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ ಬಿ ಕಡಕೋಳ ನಿರೂಪಿಸಿದರು. ಬಾಬಾಜಾನ್ ಮಾಳಗಿ ವಂದಿಸಿದರು