ಶಿಕ್ಷಕ ವಿನಾಯಕ ಹಿರೇಮಠಗೆ
ಆದರ್ಶ ಉಪಾಧ್ಯಾಯ ಪ್ರಶಸ್ತಿ
ಧಾರವಾಡ : ಸಮೀಪದ ಅಮ್ಮಿನಬಾವಿ ಗ್ರಾಮದ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿನಾಯಕ ಹಿರೇಮಠ ಅವರಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘವು ಕೊಡಮಾಡುವ ‘ಆದರ್ಶ ಉಪಾಧ್ಯಾಯ ಪ್ರಶಸ್ತಿ’ ಲಭಿಸಿದೆ.
ಧಾರವಾಡ ನಗರದ ಶಿವಾಜಿ ಸರ್ಕಲ್ ಬಳಿ ಇರುವ ಕೆ.ಇ. ಬೋರ್ಡಿನ ಪದವಿ ಕಾಲೇಜಿನಲ್ಲಿ ರವಿವಾರ(ಸ.29) ಮುಂಜಾನೆ 10-45 ಗಂಟೆಗೆ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಆ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಜರುಗಲಿದೆ.
————————————