ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸ ಮಾ ಪ್ರಾಥಮಿಕ ಶಾಲೆಯಲ್ಲಿ ಶಾಸಕರಾದ ಡಾ ಚಂದ್ರು ಲಮಾಣಿ ಇವರಿಂದ ತಾಲೂಕಾ ಮಟ್ಟದ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟನೆ.
“ಪೌಷ್ಟಿಕ ಆಹಾರ ಮಕ್ಕಳ ಬೌದ್ಧಿಕ ಬೆಳವಣಿಗೆ ಸಹಕಾರಿ” ಎಂದು ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನೀಡುವ ವಾರದಲ್ಲಿ ನಾಲ್ಕು ದಿನಗಳ ಕಾಲ ನೀಡುವ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶಿರಹಟ್ಟಿ ತಾಲೂಕಿನ ಜನಪ್ರಿಯ ಶಾಸಕರಾದ ಡಾ.ಚಂದ್ರು ಲಮಾಣಿ ಮಾತನಾಡಿದರು.
ಅವರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 1 ಲಕ್ಷ್ಮೇಶ್ವರ ಇಲ್ಲಿ ವಾರದ ಆರೂ ದಿನ ಮೊಟ್ಟೆ /ಶೆಂಗಾ ಚಕ್ಕೆ /ಬಾಳೆ ಹಣ್ಣು ವಿತರಣೆ ಮಾಡುವ ಕಾರ್ಯಕ್ಕೆ ಮಕ್ಕಳಿಗೆ ಮೊಟ್ಟೆ, ಶೆಂಗಾ ಚೆಕ್ಕಿ, ಬಾಳೆ ಹಣ್ಣು ವಿತರಣೆ ಮಾಡುವ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಎನ್. ನಾಯಕ್ ಅವರು ಮಾತನಾಡಿ ಮಕ್ಕಳು ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುರಸಭೆ ಸದಸ್ಯರಾದ ಶ್ರೀಮತಿ ಪೂರ್ಣಿಮಾ ಪಾಟೀಲ್ ಮಾತನಾಡಿ ಸರ್ಕಾರ ಯೋಜನೆಗೆ ಸಹಾಯ ನೀಡಿದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಗೆ ಧನ್ಯವಾದಗಳನ್ನು ತಿಳಿಸಿದರು.
ಸರ್ಕಾರಿ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟದೊಂದಿಗೆ ವಾರದ 6 ದಿನವೂ ಮೊಟ್ಟೆ ವಿತರಣೆ ಮಾಡುತ್ತಿದೆ. ಈ ಕಾರ್ಯಕ್ರಮ ಮಕ್ಕಳಲ್ಲಿನ ಅಪೌಷ್ಟಿಕತೆಯ ಕೊರತೆಯನ್ನು ನಿವಾರಿಸಲು ಸಹಕಾರಿಯಾಗಿದೆ.
ಈ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಸರ್ಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಎಚ್ ಎಸ್ ರಾಮನಗೌಡ್ರ ಸಹಾಯಕ ನಿರ್ದೇಶಕರು ಶಿರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ್ ಗೋಡಿ ಬಿಎಮ್ ಕುಂಬಾರ, ಡಿ ಎನ್ ದೊಡ್ಡಮನಿ ಸಿಆರ್ ಪಿ ಗಳಾದ ಸತೀಶ್ ಬೋಮಲೆ,ಎನ್.ಎ ಮುಲ್ಲಾ ,ಎಸ್.ಎಸ್. ಮುಳಗುಂದ ಎಸ್.ಎಸ್. ಮಹಾಲಿಂಗ ಶೆಟ್ಟರ, ಈ ಎಚ್ ಪೀಟರ್ ,ಸವಿತಾ ಬೋಮಲೆ, ಚೈತನ್ಯ ಮುದುಗಲ್, ಎಮ್ ಎನ್ ಭರಮಗೌಡ್ರ, ಎಂ ಎಸ್ ಹಿರೇಮಠ ಎನ್ ಎನ್ ಶಿಗ್ಲಿ ಉಪಸ್ಥಿತರಿದ್ದರು. ಸಿ.ಆರ್.ಪಿ.ಉಮೇಶ ನೇಕಾರ ಸ್ವಾಗತಿಸಿದರು ,ಆರ್ ಬಿ ಅಡರಕಟ್ಟಿ ನಿರೂಪಿಸಿದರು ,ಡಿ ಎನ್ ದೊಡ್ಮನಿ ವಂದಿಸಿದರು.