ಮಾನ್ಯಶ್ರೀ ಮಧು ಬಂಗಾರಪ್ಪನವರು ಮಾನ್ಯ ಶಿಕ್ಷಣ ಮಂತ್ರಿಗಳವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ
ವಿಧಾನ ಸೌಧ, ಬೆಂಗಳೂರು -560001
ವಿಷಯ: ದಿನಾಂಕ:1.07.2022 ರಿಂದ 31.07.2024(25 ತಿಂಗಳು)ನಡುವೆ ನಿವೃತ್ತಿಯಾಗಿರುವ ನೌಕರರಿಗೆ ನಿವೃತ್ತಿ ಸೌಲಭ್ಯಗಳಾದ DCRG, EL ENCASHMENT, COMMUTATION ಗಳನ್ನೂ 7ನೇ ವೇತನ ಆಯೋಗದ ಪರಿಷ್ಕೃತ ವೇತನದನ್ವಯ ಸಾಂಪ್ರದಾಯಕವಾಗಿ ನಮಗೂ ನೀಡುವ ಬಗ್ಗೆ ಬಿನ್ನವತ್ತಳೆ.
ಮಾನ್ಯರೆ,
ನಾವುಗಳು ದಿ. 18-9-2024 ರಂದು ಫ್ರೀಡಮ್ ಪಾರ್ಕ ಬೆಂಗಳೂರು ಇಲ್ಲಿ ನಮ್ಮ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಅಡಿಯಲ್ಲಿ ರಾಜ್ಯದ ಸಹಸ್ರಾರು ನಿವೃತ್ತ ನೌಕರರು ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಹಕ್ಕೊತ್ತಾಯದೊಂದಿಗೆ ಈ ಬಿನ್ನವತ್ತಳೆಯನ್ನು ತಮಗೆ ಸಮರ್ಪಿಸುತ್ತಿದ್ದೇವೆ.
ತಾವುಗಳು ಎಲ್ಲಾ ಸೇವಾನಿರತ ಹಾಗೂ ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯವನ್ನು ಅನುಷ್ಠಾನಕ್ಕೆ ತಂದಿರುತ್ತೀರಿ.ಈ ದಿಸೆಯಲ್ಲಿ ತಮಗೆ ನಾಡಿನ ಸಮಸ್ತ ನಿವೃತ್ತ ನೌಕರರು ಅಭಿನಂದನೆಗಳನ್ನು ಅರ್ಪಿಸುತ್ತಿದ್ದೇವೆ.
ಮೇಲಿನ ವಿಷಯದನ್ವಯ ದಿನಾಂಕ: 1.07.2022 ರಿಂದ 31.07.2024(25 ತಿಂಗಳು) ರ ನಡುವೆ ನಿವೃತ್ತರಾದ 17963 ಕರ್ನಾಟಕ ರಾಜ್ಯ ಸರ್ಕಾರದ ನೌಕರರಾದ ನಮ್ಮಗಳಲ್ಲಿ ಶೇಕಡಾ 40 ಶಿಕ್ಷಕರು, ಶೇಕಡಾ 12 ಆರೋಗ್ಯ ಇಲಾಖಾ ನೌಕರರು, ಶೇಕಡಾ 10 ಆರಕ್ಷಕ ಸಿಬ್ಬಂದಿ, ಉಳಿದ ಶೇಕಡಾ 38 ಭಾಗ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಇದ್ದು ತಮಲ್ಲಿ ಈ ಮೂಲಕ ವಿನಯ ಪೂರ್ವಕವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ, ಪ್ರತಿಬಾರಿ ವೇತನ ಆಯೋಗಗಳ ಪರಿಷ್ಕೃತ ವೇತನಗಳ ಮೇಲೆ ನಿವೃತ್ತರಾದ ನೌಕರರಿಗೆ ಸಾಂಪ್ರದಾಯಕವಾಗಿ ಪರಿಷ್ಕೃತ ವೇತನ ಶ್ರೇಣಿಯ ಮೇಲೆ ಆರ್ಥಿಕ ಸೌಲಭ್ಯಗಳಾದ DERG,COMMUTATION, EL ENCASHMENT ಸರ್ಕಾರ ನೀಡುತ್ತಾ ಬಂದಿರುತ್ತದೆ, ಅದರಂತೆ ನಾವುಗಳು ಕೂಡ 7ನೇ ವೇತನ ಆಯೋಗದ ಪರಿಷ್ಕೃತ ವೇತದ ಮೇಲೆ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಿದ್ದರು. ನಮಗೆ ಕೊಡದೆ ಹಳೆಯ ವೇತನದಲ್ಲಿ ಸೌಲಭ್ಯ ನೀಡಿರುವುದು 35-40 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಕೆಳ ಹಂತದ ವೇತನ ಶ್ರೇಣಿಯಲ್ಲಿ ನೌಕರಿಗೆ ಸೇರಿ ನಿವೃತ್ತರಾದ ನಾವುಗಳು ನಿವೃತ್ತಿ ಸಂದರ್ಭದಲ್ಲಿ ನಮಗೆ ಬರಬಹುದಾದ ಆರ್ಥಿಕ ಸೌಲಭ್ಯಗಳ ಮೇಲೆಯೇ ಅವಲಂಬಿತವಾಗಿ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು.
ಆದರೆ ನಮ್ಮಗಳಿಗೆ ಸರ್ಕಾರದ ಈ ನಿರ್ಧಾರದಿಂದ ತುಂಬಾ ಆರ್ಥಿಕ ನಷ್ಟ ಉಂಟಾಗಿ ಅತಿಯಾಗಿ ನೊ೦ದಿರುತ್ತೇವೆ. ಮೇಲೆ
ಹೇಳಿದಂತೆ ನಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಆರೋಗ್ಯ ಇಲಾಖೆ ನೌಕರರು, ಅರಕ್ಷಕ ಸಿಬ್ಬಂದಿಗಳನ್ನು ಒಳಗೊಂಡಿದ್ದು, 1986, 1988 ಬ್ಯಾಚ್ ನಲ್ಲಿ ನೇಮಕ ಆದಂತವರಿದ್ದು ಆಗಿನ ಕಾಲದ ಸಂಬಳದ ಆದಾಯದಲ್ಲಿ ತಂದೆ, ತಾಯಿ, ಸಹೋದರ ಸೋದರಿಯರ ತುಂಬು ಕುಟುಂಬಗಳ ನಡುವೆ ಜನಿಸಿದವರಾಗಿದ್ದು, ಮದುವೆ, ಮುಂಜಿವೆ, ಪೋಷಣೆ ಇತ್ಯಾದಿಗಳಿಗಾಗಿ ನಮಗೆ ಬರುತ್ತಿದ್ದ ಸ೦ಬಳದಿಂದ ವಿನಿಯೋಗಿಸಿ ಹೆಂಡತಿ, ಮಕ್ಕಳು, ನಮಗೆ ಒಂದು ಸೂರು, ಮಕ್ಕಳ ಮದುವೆ ವಿದ್ಯಾಭ್ಯಾಸ, ಇಳಿ ವಯಸ್ಸಿನ ನಮ್ಮಗಳ ಆರೋಗ್ಯ ಖರ್ಚು ವಗೈರೆಗಳಿಗಾಗಿ ನಿವೃತ್ತಿ ನಂತರ ಬರುವ ಆರ್ಥಿಕ ಸೌಲಭ್ಯಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದೇವೆ.
ಆದರೆ ನಮ್ಮ ನಿರೀಕ್ಷೆ ಹುಸಿಯಾಗಿರುತ್ತದೆ, ಆದ್ದರಿಂದ 6ನೇ ವೇತನವೂ ಸಹ ದಯಪಾಲಿಸಿದ ತಾವುಗಳು 17963 ನೌಕರರಿಗೆ ಈಗ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕೊಡಬೇಕೆಂದು ಕೋರುತ್ತಾ, ಕುಟುಂಬ ಒಂದಕ್ಕೆ 5 ಸದಸ್ಯರಂತೆ ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ರಾಜ್ಯದ ಜನರಿಗೆ ಒಳ್ಳೆಯದು ಮಾಡಿದಂತಾಗುತ್ತದೆ, ಇದಕ್ಕೆ ನಾವೆಲ್ಲರೂ ತಮಗೆ ಹಾಗು ತಮ್ಮ ಘನ ಸರ್ಕಾರಕ್ಕೆ ಸದಾ ಚಿರಋಣಿಯಾಗಿರುತ್ತೇವೆ. ನಮ್ಮಗಳಿಗೆ ಕೊಡಮಾಡಬಹುದಾದ ಸೌಲಭ್ಯಯದಲ್ಲಿ ಶೇಕಡಾ 60 commutation ಸಾಲ ಬಾಬು ಒಳಗೊಂಡಿದ್ದು ಅದನ್ನು ನಾವು ಶೇಕಡಾ 56 ಹೆಚ್ಚು ಸೇರಿಸಿ ಮರು ಪಾವತಿ ಮಾಡುವುದರಿಂದ ಸರ್ಕಾರಕ್ಕೆ ಇದು ಹೊರೆಯಾಗುವುದಿಲ್ಲ, ಇನ್ನು EL ENCASHNENT ಬಾಬತ್ತು ಸಹ ಹೆಚ್ಚಿನ ಸಂಖ್ಯೆ ಯ ಶಿಕ್ಷಕರೆ ಇರುವುದರಿಂದ ವ್ಯತ್ಯಾಸ ಮೊತ್ತ ಕಡಿಮೆ ಇರುತ್ತದೆ.
ಈ ನಿಟ್ಟಿನಲ್ಲಿ ನಾವುಗಳೂ ಸಹ ಏಳನೇ ವೇತನ ಆಯೋಗದ ವರದಿಯ ಅವಧಿಯಲ್ಲಿ ಸೇವೆ ನಿರ್ವಹಿಸಿದ್ದು ಪರಿಷ್ಕೃತ ವೇತನದಲ್ಲಿ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ. ಕಾರಣ ತಾವುಗಳು ಏಳನೇ ವೇತನ ಆಯೋಗದ ಆದೇಶವನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಿ ನಮಗೆ ಆರ್ಥಿಕ ಸೌಲಭ್ಯ ನೀಡಬೇಕೆಂದು ಈ ಹಕ್ಕೊತ್ತಾಯದ ಮನವಿ ಮೂಲಕ ತಮ್ಮಲ್ಲಿ ನಾಡಿನ ಸಮಸ್ತ ನಿವೃತ್ತ ನೌಕರರು ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಈ ಮೇಲಿನ ಬೇಡಿಕೆಯನ್ನು ಸರಕಾರವು ಈಡೇರಿಸಿಕೊಡುವಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ತಮ್ಮ ನೇತೃತ್ವದಲ್ಲಿ ಸಭೆ ನಡೆಸಿ ಈಡೇರಿಸಿಕೊಡಲು ರಾಜ್ಯದ ಸಮಸ್ತ ನಿವೃತ್ತ ನೌಕರರು ವಿನಂತಿಸಿಕೊಳ್ಳುತ್ತೇವೆ.
ಪತ್ರಿಕಾ ಪ್ರಕಟಣೆ ಮೂಲಕ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕರಾದ ಅಶೋಕ ಎಮ್ ಸಜ್ಜನ ಹಾಗೂ ರಾಜ್ಯ ಮಹಾ ಪ್ರಧಾನ ಸಂಚಾಲಕರಾ್ಎ ಮ್ ಪಿ ಎಮ್ ಷಣ್ಮುಖಯ್ಯ ತಿಳಿಸಿದ್ದಾರೆ..